ಲಿಂಗಸುಗೂರು | ಅಂಜುಮನ್ ಕಮಿಟಿಯಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ

ಲಿಂಗಸುಗೂರು: ಲಿಂಗಸುಗೂರು ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಗೆ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗುರುಸ್ವಾಮಿಗಳಾದ ಸಿದ್ದರಾಮ ಸ್ವಾಮಿಗಳ ನೇತೃತ್ವದ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡಿದ ಮುಸ್ಲಿಂ ಕಮಿಟಿಯ ಸದಸ್ಯರು ಭಾವೈಕ್ಯತೆ ಮೆರೆದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶದ ನಾಗರಿಕರು ಪರಸ್ಪರ ಗೌರವಿಸುತ್ತಾ ಸುಃಖ ದುಃಖ, ಹಬ್ಬ ಹರಿದಿನಗಳಲ್ಲಿ ಒಗ್ಗೂಡಬೇಕು. ಇದೇ ನಿಜವಾದ ಭಾವೈಕ್ಯತೆ ಎಂದು ಎರಡು ಸಮುದಾಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹನಾ ಮೊಬೈಲ್ ಅಂಗಡಿ ಮಾಲಕರಾದ ವಿಜಯ್ ಸರ್ದಾರ್, ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವಧ್ಯಕ್ಷರಾದ ಅನ್ಸರ್, ಅಧ್ಯಕ್ಷರಾದ ಹುಸೇನ್ ಭಾಷಾ, ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿಗಳಾದ ಅಮೀನ್ ಭಾಯಿ, ಸಲೀಮ್, ಆಸೀಫ್, ಆರಿಫ್, ಇಬ್ರಾಹಿಂ, ಹಸನ್, ಆದಿಲ್, ರಫಿ ಸಂಪಂಗಿ, ರಜ್ಜಬ್, ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು





