ಮಾನ್ವಿ | ಕಲಬೆರಕೆ ಆಹಾರ ಪದಾರ್ಥ ಮಾರಾಟ : ಅಧಿಕಾರಿಗಳಿಂದ ದಾಳಿ

ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ವಾರ್ಡ್ ನಂ25 ರಲ್ಲಿ ಬರುವ ಇಸ್ಲಾಂ ನಗರದ ಖಾಲಿ ನಿವೇಶನದಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ನಡೆಯುತ್ತಿರುವ ಖಚಿತ ಮಾಹಿತಿಯ ಮೇರೆಗೆ ಗುರುವಾರ ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಆಕಸ್ಮಿಕವಾಗಿ ಜಂಟಿ ದಾಳಿ ನಡೆಸಿ ಕಲಬೆರಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸ್ಥಳದಲ್ಲಿ ಆಹಾರ ಪಧಾರ್ಥಗಳನ್ನು ಕಲಬೆರಕೆ ಮಾಡುವುದಕ್ಕೆ ಬಳಸುತ್ತಿದ್ದ ರಾಸಾಯನಿಕ ಬಣ್ಣ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹಾಗೂ ಕಲಬೆರಕೆ ಮಾಡಲಾದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ವೇಳೆ ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ ಮಾತನಾಡಿದರು.
ದಾಳಿಯಲ್ಲಿ ಪುರಸಭೆ ಆಹಾರ ನಿರೀಕ್ಷಕ ಮಹೇಶಕುಮಾರ ಹಾಗೂ ಸಿಬ್ಬಂದಿಗಳು ಇದ್ದರು.
Next Story





