ಮಾನ್ವಿ | ಅಕ್ರಮ ಮರಳು ಸಾಗಾಟ ಆರೋಪ : 14 ಟಿಪ್ಪರ್‌ಗಳು ವಶ

ರಾಯಚೂರು: ಮಾನ್ವಿ ತಾಲೂಕಿನ ಮದ್ಲಾಪೂರು ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ 14 ಟಿಪ್ಪರ್ ಹಾಗೂ ಒಂದು ಜೆಸಿಬಿ ವಶಪಡಿಸಿಕೊಂಡಿದ್ದಾರೆ.
ಮಾನ್ವಿ ಪಿ.ಐ. ಸೋಮಶೇಖರ ಕೆಂಚರೆಡ್ಡಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ್ದು, ಈ ವೇಳೆ 2 ಟಿಪ್ಪರ್‌ಗಳಲ್ಲಿ ಮರಳು ತುಂಬಿಸಿಕೊಂಡಿದ್ದರೆ, ಇತರ ವಾಹನಗಳ ಚಾಲಕರು ಹಾಗೂ ಜೆ.ಸಿ.ಬಿ ಆಪರೇಟರ್ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಸರ್ಕಾರಕ್ಕೆ ಆದಾಯ ತುಂಬದೇ ಸ್ವಂತ ಲಾಭಕ್ಕಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮಾಲಕರು ಹಾಗೂ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಪಂಚರ ಸಮ್ಮುಖದಲ್ಲಿ ಟಿಪ್ಪರ್‌ಗಳು ಹಾಗೂ ಜೆ.ಸಿ.ಬಿ ಅನ್ನು ಜಪ್ತಿ ಮಾಡಲಾಗಿದ್ದು, ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





