ಮಾನ್ವಿ | ನಿಯಂತ್ರಣ ತಪ್ಪಿ ರಸ್ತೆಬದಿಗೆ ಉರುಳಿದ ಈರುಳ್ಳಿ ಲಾರಿ: ಚಾಲಕ, ಕ್ಲಿನರ್ಗೆ ಗಾಯ
ಉರುಳಿಬಿದ್ದ ಲಾರಿಯಿಂದ ಈರುಳ್ಳಿ ಹೊತ್ತೊಯ್ದ ಜನರು

ಮಾನ್ವಿ: ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಉರುಳಿಬಿದ್ದ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲಿನರ್ಗೆ ಗಾಯಗಳಾಗಿವೆ.
ಲಾರಿ ಉರುಳಿಬಿದ್ದ ತಕ್ಷಣ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಲಾರಿಯಲ್ಲಿದ್ದ ಈರುಳ್ಳಿಯನ್ನು ಮುಗಿಬಿದ್ದು ಹೊತ್ತೊಯ್ದಿದ್ದಾರೆ. ಇದರಿಂದ ಲಾರಿಯಲ್ಲಿದ್ದ ಈರುಳ್ಳಿಯೆಲ್ಲ ಖಾಲಿಯಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Next Story




