ಮಾನ್ವಿ | ಸಮುದಾಯ ಭವನದ ನಾಮಫಲಕ ಬಿದ್ದು ಇಬ್ಬರು ಮಕ್ಕಳು ಮೃತ್ಯು

ಬಯಲಾಟ ವೀಕ್ಷಣೆ ವೇಳೆ ದುರ್ಘಟನೆ: ನಾಲ್ವರಿಗೆ ಗಂಭೀರ ಗಾಯ
ರಾಯಚೂರು: ಬಯಲಾಟ ವೀಕ್ಷಣೆ ವೇಳೆ ಸಮುದಾಯ ಭವನದ ನಾಮಫಲಕ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಮಾನ್ವಿ ತಾಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಮಕ್ಕಳ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ಮಕ್ಕಳನ್ನು ವಿಶ್ವನಾಥ ರಾಮಲಿಂಗ (9) ಮತ್ತು ಸನ್ವಿತಾ ಪೆದ್ದಯ್ಯ (2 ) ಎಂದು ಗುರುತಿಸಲಾಗಿದೆ.
ಬಸ್ಸಮ್ಮ ಹನುಮಂತ್ರಾಯ (40), ಲಕ್ಷ್ಮೀ ಹನುಮಂತ್ರಾಯ (18 ), ಬಾಲಕಿ ಯಲ್ಲಮ್ಮ, ಸಣ್ಣ ವಿರೇಶ (3) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಲ್ ಮರ್ಚೇಡ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಯಲಾಟ ಆಯೋಜಿಸಲಾಗಿತ್ತು. ಅಲ್ಲೇ ಪಕ್ಕದ ಸಮುದಾಯ ಭವನದ ಮುಂಭಾಗದಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಯಲಾಟ ವೀಕ್ಷಣೆಗೆ ಕುಳಿತಿದ್ದರು. ಈ ವೇಳೆ ಏಕಾಏಕಿ ಸಮುದಾಯ ಭವನದ ನಾಮಫಲಕ ಕುಸಿದುಬಿದ್ದು ಅವಘಢ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story




