ರಾಯಚೂರು: ತಾಯಿ, ಮಗಳು ನಾಪತ್ತೆ

ರಾಯಚೂರು: ಚಂದ್ರಬಂಡ ರಸ್ತೆಯ ಹಳೆ ಆಶ್ರಯ ಕಾಲೋನಿಯ ನಿವಾಸಿಗಳಾದ ಫಾತಿಮಾ (45) ಹಾಗೂ ಅವರ ಮಗಳು ಸಾನಿಯಾ ಬೇಗಂ (17) ಕಾಣೆಯಾಗಿದ್ದು, ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.13ರ ಬೆಳಗ್ಗೆ 7.30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಲ್ಲಿದ್ದ 10 ಸಾವಿರ ನಗದು ಮತ್ತು ಬೆಳ್ಳಿ ಕಾಲು ಚೈನ್ ತೆಗೆದುಕೊಂಡು ಹೋದವರು ಮರಳಿ ಬಂದಿಲ್ಲ. ತಾಯಿ, ಮಗಳ ಸುಳಿವು ಸಿಕ್ಕವರು ಠಾಣೆಯ 08532-235600, ಪಿಎಸ್‍ಐ 9480803849 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
Next Story





