ಎ.20 ರವರೆಗೆ ಎನ್‌ಆರ್‌ಬಿಸಿ ಕಾಲುವೆಗಳಿಗೆ ನೀರು ಹರಿಸಲು ಸಂಸದ ಜಿ.ಕುಮಾರ ನಾಯಕ್ ಒತ್ತಾಯ

ರಾಯಚೂರು : ಮುಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆದ ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಎಲ್ಲಾ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಸಂಸದ ಜಿ.ಕುಮಾರ ನಾಯಕ್ ಒತ್ತಾಯಿಸಿದ್ದಾರೆ.
ಕಾಲುವೆಗಳಿಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸುವ ಬಗ್ಗೆ ನಿನ್ನೆ ಕೆಬಿಜಿಎನ್‌ಎನ್ ಅಧಿಕಾರಿಗಳು ಪೂರ್ವಭಾವಿ ಸಭೆಯನ್ನು ನಡೆಸಿದ್ದು, ಈ ಹಿಂದಿನ ಸಭೆಯಲ್ಲಿ 2024ರ ಡಿ.9 ರಿಂದ ಮಾ. 23ರ ವರೆಗೆ ನೀರು ಹರಿಸುವ ನೀರು ಹರಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಎಪ್ರಿಲ್ ವರೆಗೆ ನೀರು ಹರಿಸಬೇಕು. ಏ.20ರವರೆಗೆ ನೀರು ಹರಿಸದಿದ್ದರೆ ನಾರಾಯಣಪುರ ಬರದಂಡೆ ಕಾಲುವೆ ವ್ಯಾಪ್ತಿಯ ಸರಿಸುಮಾರು 1 ಲಕ್ಷ 20 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಅನೇಕ ಬೆಳೆಗಳು ಒಣಗಿ ರೈತರು ನಷ್ಟಕ್ಕೆಡಾಗುತ್ತಾರೆ ಎಂದು ಸಂಸದರು ಕೆಬಿಜಿಎನ್ ಎನ್ ಅಧಿಕಾರಿಗಳೊಂದಿಗೆ ಮಾತನಾಡಿ ಒತ್ತಾಯಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ.
Next Story