ರಾಯಚೂರು | ನೀರನ್ನು ಕಾಯಿಸಿ, ಸೋಸಿ ಕುಡಿಯುವಂತೆ ಪಾಲಿಕೆಯಿಂದ ಸೂಚನೆ

ರಾಯಚೂರು: ಪ್ರಸ್ತುತ ಮಳೆ ಸುರಿದಿರುವುದರಿಂದ ಕೃಷ್ಣ ಮತ್ತು ತುಂಗಾಭದ್ರ ನದಿಯಲ್ಲಿ ಹೆಚ್ಚಿನ ಪ್ರಮಾಣದ ಹೊಂಡು ಮಿಶ್ರಿತ ನೀರು ಬರುವ ಸಂಭವವಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳ ನಿವಾಸಿಗಳು ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ ಸೋಸಿ ಕುಡಿಯಬೇಕೆಂದು ಕೋರಲಾಗಿದೆ.
ಕುಡಿಯುವ ನೀರಿನ ಸರಬರಾಜು ಕೇಂದ್ರಗಳಾದ ರಾಂಪೂರು ಮತ್ತು ಚಿಕ್ಕಸೂಗೂರು ಜಲಶುದ್ದೀಕರಣ ಘಟಕಗಳಿಂದ ಕುಡಿಯುವ ನೀರನ್ನು ಶುದ್ದೀಕರಿಸಿ ನಗರದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನಗರದ ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ ಸೋಸಿ ಕುಡಿಯಲು ಹಾಗೂ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕೆಂದರು ರಾಯಚೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





