Raichuru | ಕತ್ತು ಸೀಳಿ ಯುವಕನ ಕೊಲೆ

ಸಾಂದರ್ಭಿಕ ಚಿತ್ರ | PC : PTI
ರಾಯಚೂರು: ನಗರದ ಕುಲಸುಂಬಿ ಕಾಲನಿಯಲ್ಲಿ ಯುವಕನೋರ್ವನನ್ನು ಕತ್ತು ಸೀಳಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ಯುವಕನನ್ನು ತಿರುಪತಿ( 34)ಎಂದು ಗುರುತಿಸಲಾಗಿದೆ. ಇವರು ಕಟ್ಟಡ ಕಾರ್ಮಿಕರಾಗಿದ್ದರು. ಶುಕ್ರವಾರ ಹತ್ಯೆ ನಡೆದಿದ್ದು, ತಿರುಪತಿ ವಾಸವಿದ್ದ ಮನೆಯಲ್ಲೇ ಅವರನ್ನು ಕೊಲೆಗೈದು ಬಳಿಕ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಮನೆ ಪರಿಸರದಿಂದ ವಿಪರೀತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯ ಬೀಗ ಮುರಿದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಪಶ್ಚಿಮ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Next Story




