Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ರಾಯಚೂರು
  4. ಹಲವು ಸಮಸ್ಯೆಗಳಿಂದ ಕೂಡಿದ ರಾಯಚೂರು ನೂತನ...

ಹಲವು ಸಮಸ್ಯೆಗಳಿಂದ ಕೂಡಿದ ರಾಯಚೂರು ನೂತನ ಜಿಲ್ಲಾಡಳಿತ ಭವನ

ಒಂದೇ ಸೂರಿನಡಿ ಸರಕಾರಿ ಇಲಾಖೆಗಳನ್ನು ತರುವ ಉದ್ದೇಶ ವಿಫಲ

ಬಾವಸಲಿ ರಾಯಚೂರುಬಾವಸಲಿ ರಾಯಚೂರು25 Feb 2025 1:29 PM IST
share
ಹಲವು ಸಮಸ್ಯೆಗಳಿಂದ ಕೂಡಿದ ರಾಯಚೂರು ನೂತನ ಜಿಲ್ಲಾಡಳಿತ ಭವನ

ರಾಯಚೂರು: ಜಿಲ್ಲಾ ಕೇಂದ್ರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ಸಂಚಾರ ದಟ್ಟಣೆ, ಒಂದೇ ಸೂರಿನಡಿ ಸರಕಾರಿ ಇಲಾಖೆಗಳನ್ನು ತರುವ ಉದ್ದೇಶದಿಂದ ಮಹಾನಗರ ಪಾಲಿಕೆಯ ಹೊರವಲಯದ ಯಕ್ಲಾಸಪೂರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾಡಳಿತ ಭವನ ಸಾರ್ವಜನಿಕರ ಅನುಕೂಲಕ್ಕಿಂತ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದು ಸಾರ್ವಜನನಿಕರ ಆರೋಪವಾಗಿದೆ. ಹಲವು ದಶಕಗಳಿಂದ ರಾಯಚೂರು ನಗರದಲ್ಲಿರುವ ಐತಿಹಾಸಿಕ ಸಾಥ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಜೊತೆಗೆ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದಾಗಿ ನಗರ ಮತ್ತು ತಾಲೂಕುಗಳ ಜನರಿಗೆ ಬಂದು ಹೋಗಲು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ನಗರದ ಹೊರವಲಯ ಸುಮಾರು 5 ಕಿ.ಮೀ ದೂರದಲ್ಲಿರುವ ಯಕ್ಲಾಸಪುರದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿದ್ದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬುದು ಆದರೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರ ಆರೋಪವಾಗಿದೆ.

ನಗರದ ಹೊರವಲಯದ ಯಕ್ಲಾಸಪೂರ ಗ್ರಾಮದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣದ ಕಾಮಗಾರಿಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. ಆಮೆಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ನೂತನ ಜಿಲ್ಲಾಧಿಕಾರಿ ನಿತಿಶ್.ಕೆ., ಅವರು ವೇಗ ನೀಡುವುದರ ಜೊತೆಗೆ ಸಣ್ಣಪುಟ್ಟ ಕೆಲಸಗಳಿದ್ದರೂ ಜಿಲ್ಲಾಡಳಿತ ಭವನ ಕಾರ್ಯಾರಂಭ ಮಾಡಿಸಿದರು.

ಜನರಿಗೆ ಸರಳ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ಕೊಡಬೇಕು ಎನ್ನುವ ಸದುದ್ದೇಶದಡಿ ಸರಕಾರದ ಎಲ್ಲ ಪ್ರಮುಖ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಸೇರಿಸಿ ಜಿಲ್ಲಾಡಳಿತ ಭವನ (ಮಿನಿ ವಿಧಾನಸೌಧ)ವನ್ನು ಕಟ್ಟುತ್ತಾರೆ. ಆದರೆ, ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನವು ಅದಕ್ಕೆ ತದ್ವಿರುದ್ಧವಾಗಿ ಗೋಚರಿಸಿರುವುದು ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ.

ಮೂಲಸೌಕರ್ಯಗಳ ಕೊರತೆ: ಆಧುನಿಕ ಶೈಲಿಯಲ್ಲಿ ಆಕರ್ಷಕವಾಗಿ ದೊಡ್ಡದಾದ ಜಿಲ್ಲಾಡಳಿತ ಭವನ ನಿರ್ಮಿಸಿದ್ದಾರೆ. ಆದರೆ ಇಲ್ಲಿ ಕುಡಿಯಲು ನೀರು, ಹೊಟೇಲ್, ವಾಹನಗಳ ಪಾರ್ಕಿಂಗ್, ವಿದ್ಯುತ್, ಅಂತರ್ಜಾಲ ಸೇರಿದಂತೆ ಇತರ ಸವಲತ್ತುಗಳು ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ನಗರದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಿದ್ದ ಅಧಿಕಾರಿಗಳು ಮಧ್ಯಾಹ್ನದ ಊಟಕ್ಕೆ ಮನೆ ಬರುತ್ತಿದ್ದರು ಇದೀಗ ದೂರವಾಗಿದ್ದರಿಂದ ಬುತ್ತಿಕಟ್ಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬುತ್ತಿ ತಪ್ಪಿದರೇ ಅಲ್ಲೇನು ತಿನ್ನಲು ಸಿಗುತ್ತಿಲ್ಲ ಎಂದು ಅನೇಕ ಸಿಬ್ಬಂದಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪ್ರಚಾರದ ಕೊರತೆ, ಸಾರ್ವಜನಿಕರ ಅಲೆದಾಟ: ಕಾಮಗಾರಿ ಪೂರ್ಣಗೊಳ್ಳತ್ತಿದ್ದರೂ ತರಾತುರಿಯಲ್ಲಿ ಸ್ಥಳಾಂತರಗೊಂಡ ನೂತನ ಜಿಲ್ಲಾಡಳಿತ ಕಚೇರಿಯ ಬಗ್ಗೆ ಇನ್ನೂ ಅನೇಕರಿಗೆ ಮಾಹಿತಿ ಇಲ್ಲ. ಹಳ್ಳಿಗಳಿಂದ ಬರುವ ಅನೇಕರು ಸಾತ್ ಕಚೇರಿ ಬಳಿಯ ಹಳೆಯ ಜಿಲ್ಲಾಡಳಿತ ಕಚೇರಿಗೆ ಹೋಗಿ ಬರುತ್ತಿದ್ದಾರೆ. ಹೊಸ ಜಿಲ್ಲಾಡಳಿತ ಭವನಕ್ಕೆ ತೆರಳಲು ಆಟೊಗಳಿಗೆ ನೂರಾರು ರೂ.ನೀಡಬೇಕಾಗುತ್ತ್ತದೆ. ತಹಶೀಲ್ದಾರ್ಕಚೇರಿಯಲ್ಲಿ ಕೆಲಸಕ್ಕೆ ಬಂದವರು ಅಗತ್ಯಕ್ಕನುಗುಣವಾಗಿ ಡಿಸಿ ಕಚೇರಿಗೆ ತೆರಳಲು ಬಂದರೆ ಸಾಕು ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಪ್ರತಿಭಟನೆ-ಮನವಿಗಳು ಗೌಣ: ಸ್ಥಳೀಯ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೃಷಿಕರು, ಕಾರ್ಮಿಕರು, ಬಡವರು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ನೌಕರರು, ಸಿಬ್ಬಂದಿ, ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನ ಸೆಳೆಯುವುದಕ್ಕಾಗಿ ಹಳೆಯ ಡಿಸಿ ಕಚೇರಿ ಎದುರು ನಿರಂತರ ಪ್ರತಿಭಟನೆಗಳು ನಡೆಸಿ ಹಲವು ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಪರ, ವಿರೋಧಕ್ಕೆ ಕಾರಣವಾಗಿತ್ತು: ನಗರದಿಂದ ಯಕ್ಲಾಸಪುರ ಗ್ರಾಮಕ್ಕ ಜಿಲ್ಲಾಡಳಿತ ಭವನ ನಿರ್ಮಿಸುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದರೂ ಸಹ ಜಿಲ್ಲೆಯ ಹಿರಿಯ ನಾಯಕರ ಸ್ವಾರ್ಥ ರಾಜಕೀಯದ ಲಾಭಕ್ಕಾಗಿ ಜಿಲ್ಲಾಡಳಿತದ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.

ಸಮೀಪದ ಯಕ್ಲಾಸಪುರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನದಿಂದಾಗಿ ಕೇವಲ ಜಿಲ್ಲೆ ಸಾರ್ವಜನಿಕರಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗಷ್ಟೇ ಅಲ್ಲ ಅಲ್ಲಿಯ ಗ್ರಾಮಸ್ಥರಿಗೂ ಹಲವಾರು ರೀತಿಯಲ್ಲಿ ಕಿರಿಕಿರಿ ಶುರುವಾಗಿದೆ.

ಹಿಂದಿನ ನಗರಸಭೆಯ ವಾರ್ಡ್ ನಂ.34 ವ್ಯಾಪ್ತಿಗೆ ಯಕ್ಲಾಸಪುರ ಗ್ರಾಮವು ಬರುತ್ತಿದ್ದು, ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಜಿಲ್ಲಾಡಳಿತ ಭವನವನ್ನು ಇದೇ ಗ್ರಾಮದ ಸಮೀಪದಲ್ಲಿ ನಿರ್ಮಿಸಲಾಗಿದೆ. ಆದರೆ ಇಷ್ಟು ದಿನ ನೆಮ್ಮದಿಯಿಂದ ಇದ್ದ ಗ್ರಾಮಸ್ಥರಿಗೆ ಹೊಸ ಜಿಲ್ಲಾಡಳಿತ ಭವನಕ್ಕೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವಾರು ಇಲಾಖೆಗಳು ಸ್ಥಳಾಂತರಗೊಂಡ ಬಳಿಕ ವಾಹನ ದಟ್ಟಣೆ, ದೂಳು ಇಲ್ಲದೇ ಇದ್ದ ಯಕ್ಲಾಸಪುರ ಮಂದಿ ಇದೀಗ ಕಾರು, ದ್ವಿಚಕ್ರ ವಾಹನ, ಆಟೊ, ಸಾರಿಗೆ ಬಸ್ಸಂಚಾರವು ನಿಧಾನಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಶಬ್ಧ, ವಾಯುಮಾಲಿನ್ಯ, ವಾಹನಗಳ ಕಿರಿಕಿರಿಗೆ ಬೇಸತ್ತು ಹೋಗುವಂತಾಗಿದೆ ಎಂಬುವುದು ಗ್ರಾಮಸ್ಥರ ಅಳಲಾಗಿದೆ.

ಕೇಂದ್ರ ಬಸ್ ನಿಲ್ದಾಣದಿಂದ ಯಕ್ಲಾಸಪುರದ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬರಲು ಬಸ್ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಪ್ರಕಟನೆಯನ್ನೂ ಕೊಟ್ಟಿಲ್ಲ. ಬಸ್ಗಳು ಯಾವ ಸಮಯಕ್ಕೆ ತೆರಳುತ್ತವೆ ಹಾಗೂ ಅಲ್ಲಿಂದ ನಗರಕ್ಕೆ ಬರುವ ಬಗ್ಗೆ ಸಾರ್ವಜನಿಕರಿಗೂ ಯಾವುದೇ ಮಾಹಿತಿ ನೀಡಿಲ್ಲ. ತುರ್ತು ಅಗತ್ಯವಿರುವವರು ಆಟೊದವರು ಹೇಳಿದಷ್ಟು ಹಣಕೊಟ್ಟು ಹೋಗಿ ಬರಬೇಕಾಗಿದೆ. ಆಟೊ ಚಾಲಕರು ಮನಬಂದಷ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಯಕ್ಲಾಸಪುರ ಗ್ರಾಮಸ್ಥರು ದೂರಿದ್ದಾರೆ.

ರಾಯಚೂರು ಜಿಲ್ಲಾಡಳಿತ ಭವನದ ಹೊಸ ಕಟ್ಟಡ ಸೆಟ್ಅಪ್ ಆಗಲು ಸಮಯಬೇಕಾಗಲಿದೆ. ಮೂಲಭೂತ ಸೌಕರ್ಯ ಕಲ್ಪಿಸಿ ಇಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸಲಾಗುವುದು.

-ನಿತೀಶ್, ಜಿಲ್ಲಾಧಿಕಾರಿ

ರಾಯಚೂರು ಕೇಂದ್ರ ಬಸ್ ನಿಲ್ದಾಣದಿಂದ ಹೊಸ ಜಿಲ್ಲಾಡಳಿತ ಕಚೇರಿ 7 ಕಿ.ಮೀ. ಅಂತರದಲ್ಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಲಾಭನಷ್ಟದ ಲೆಕ್ಕ ಪರಿಗಣಿಸದೇ ಪ್ರತಿ ಅರ್ಧಗಂಟೆಗೆ ಬಸ್ ಓಡಿಸಬೇಕು. ಆಟೊ ಚಾಲಕರು ಬೇಕಾಬಿಟ್ಟಿ ಹಣ ಪಡೆಯದೇ ನಿಗದಿಪಡಿಸಿದ ದರ ಪಡೆಯಲು ನಿರ್ದೇಶನ ನೀಡಬೇಕು.

-ರಝಾಕ್ ಉಸ್ತಾದ್,

ಉಪಾಧ್ಯಕ್ಷ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ

ರಾಯಚೂರು ಜಿಲ್ಲಾಡಳಿತ ಭವನಕ್ಕೆ ತೆರಳಲು ಜಿಲ್ಲಾಧಿಕಾರಿ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ನೋಡಲು ಹೊಸ ಕಟ್ಟಡವಿದೆ. ಆದರೆ ಮೂಲಭೂತ ಸೌಕರ್ಯವಿಲ್ಲ. ಅನೇಕ ಇಲಾಖೆಗಳು ಸ್ಥಳಾಂತರವಾಗಿಲ್ಲ. ಬೇಸಿಗೆ ಆರಂಭವಾಗಿದ್ದು ಕಚೇರಿಗೆ ಬರುವ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು

-ಅಝೀಝ್ ಜಾಗೀರದಾರ್, ಜಿಲ್ಲಾ ಮುಖಂಡ, ಸಿಪಿಐಎಂಎಲ್ ಲಿಬರೇಶನ್ ಪಕ್ಷ

share
ಬಾವಸಲಿ ರಾಯಚೂರು
ಬಾವಸಲಿ ರಾಯಚೂರು
Next Story
X