ರಾಯಚೂರು ಹಬ್ಬದ ಬೆಳ್ಳೆ ಮಹೋತ್ಸವ: ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ

ರಾಯಚೂರು: ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹಿಸುವ ಚಟುವಟಿಗಳನ್ನು ನಿರಂತರವಾಗಿ ಮಾಡುವುದರ ಜೊತೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ 25 ವರ್ಷಗಳಿಂದ ಆಚರಿಸಿ ರೈತರನ್ನು ಹುರಿದುಂಬಿಸುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅಭಿಪ್ರಾಯ ಪಟ್ಟರು.
ಮುನ್ನೂರುಕಾಪು ಸಮಾಜದಿಂದ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಆಯೋಜಿಸಿದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಬೆಳ್ಳೆ ಮಹೋತ್ಸವದ ಅಂಗವಾಗಿ ಮೊದಲ ದಿನದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ಮುನ್ನೂರು ಕಾಪು ಸಮಾಜ ರಾಜ್ಯದಲ್ಲಿ ಮಾದರಿ ಸಮಾಜ ಎಂದು ಹೆಗ್ಗಳಿಕೆ ಪಾತ್ರವಾಗಿದೆ ಎಂದ ಸಚಿವರು, ಈ ಭಾಗದ ಕಲೆ ಸಂಸ್ಕೃತಿ ಸಾಹಿತ್ಯ ಹಾಗೂ ಜಾನಪದ ಕ್ರೀಡೆಯನ್ನು ಹಬ್ಬದ ಮೂಲಕ ಅನಾವರಣಗೊಳಿಸಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದೆ. ನಗರದಲ್ಲಿ ಇತರ ಸಮಾಜಗಳು ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರಣನಂತರಗಳಿಂದ ಅರ್ಧಕ್ಕೆ ಮೋಟಕುಗೊಳಿಸಲಾಗುತ್ತಿದೆ. ಆದರೆ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಮತ್ತು ಬೆಲ್ಲ ನರಸರೆಡ್ಡಿ ನೇತೃತ್ವದಲ್ಲಿ ನಡೆಯುವ ಮುಂಗಾರು ಬೆಳ್ಳಿ ಹಬ್ಬ ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.
3 ಕೋಟಿ ರೂ. ಅನುದಾನದಲ್ಲಿ ಬೋಳಮದೊಡ್ಡಿ ಏತ ನೀರಾವರಿ ಟೆಂಡರ್ ಆಹ್ವಾನಿಸಲಾಗಿದೆ. ಲಿಫ್ಟ್ ಏರಿಗ್ರೇಷನ್ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡ ನಂತರ16 ಸಾವಿರ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ಬಸನಗೌಡ ದದ್ದಲ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೀರತಪಸ್ವಿ ಅಭಿನವ ರಾಚೋಟಿ ಮಹಾಸ್ವಾಮಿಗಳು ಸೋಮವಾರಪೇಟೆ ಮಠ, ಮಲ್ಲಿಕಾರ್ಜುನ ಸ್ವಾಮೀಜಿಗಳು, ಮಹಾನಗರ ಪಾಲಿಕೆ ಮಹಾಪೌರ ನರಸಮ್ಮ ನರಸಿಂಹಲು ಮಾಡಗಿರಿ, ಹಬ್ಬದಲ್ಲಿ ಪಾಲ್ಗೊಂಡ ವೀಕ್ಷಿಸಿದರು,
ಮಾಜಿ ಶಾಸಕರು ಹಾಗೂ ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಎನ್ ಶಂಕ್ರಪ್ಪ, ಜಯವಂತರಾವ್ ಪತಂಗಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ್, ಮುಹಮ್ಮದ್ ಶಾಲಂ,ಗದರ್ ಬೆಟ್ಟಪ್ಪ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.