ರಾಯಚೂರು | ಕ್ರಿಕೆಟ್ ಬೆಟ್ಟಿಂಗ್; ಓರ್ವನ ಬಂಧನ

ಸಾಂದರ್ಭಿಕ ಚಿತ್ರ
ರಾಯಚೂರು: ಏಶ್ಯ ಕಪ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಮುಹಮ್ಮದ್ ಕಲೀಂ ಪಾಷ ಎಂಬಾತನ್ನು ರವಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ವಿವಿಧೆಡೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ನಿರಂತರವಾಗಿ ಪೊಲೀಸರ ಕಾರ್ಯಚರಣೆ ನಡೆಯುತ್ತಿದೆ.
ಬಂಧಿತನಿಂದ ಮೊಬೈಲ್, ಹಣ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್ಐ ಬಸವರಾಜ ನಾಯಕ ಹಾಗೂ ಎಎಸ್ಐ ಶಿವಶರಣಪ್ಪ, ಮಲ್ಲಿಕಾರ್ಜುನ, ಮಲ್ಲಪ್ಪ, ಮಹಾಂತೇಶ , ಚಂದ್ರಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story





