ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಬಿಜೆಪಿ ಹಿನ್ನಲೆ ಉಳ್ಳವರಿಗೆ ಪಕ್ಷದ ಪ್ರಮುಖ ಹುದ್ದೆ ನೀಡಲಾಗುತ್ತಿದೆ : ಪಾಮಯ್ಯ ಮುರಾರಿ ಆರೋಪ

ರಾಯಚೂರು: ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಬಿಜೆಪಿ ಪಕ್ಷದ ಹಿನ್ನಲೆ ಉಳ್ಳವರಿಗೆ ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡಿರುವುದರಿಂದ ಅವರಿಗೆ ಕಾಂಗ್ರೆಸ್ ಪಕ್ಷದ ಗಂಧ ಗಾಳಿಯೂ ತಿಳಿದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿ ಗೋಷ್ಠಿ ನಡೆಸಿ ಮಾತನಾಡಿದ ಪಾಮಯ್ಯ ಮುರಾರಿ, ಹೂಲಗೇರಿಯವರು ಸಹ ಬಿಜೆಪಿ ಮೂಲದವರೆ, ಆದ್ದರಿಂದ ಅವರ ಮನಸ್ಸು ಆ ಕಡೆಯೇ ಸೆಳೆಯುತ್ತದೆ. ನಾವು ಕಾಂಗ್ರೆಸ್ ರಾಜ್ಯ ಮುಖಂಡರ ಆದೇಶದ ಮೇರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೂಲ ಕಾಂಗ್ರೆಸ್ ನವರ ಶ್ರಮದಿಂದಲೇ ತಾವು ಶಾಸಕರಾಗಿದ್ದೀರಿ. ಆದರೆ ಕಳೆದ ಚುನಾವಣೆ ವಲಸೆ ಬಂದವರಿಗೆ ಮಣೆ ಹಾಕಿದ್ದರಿಂದ ಸೋಲಬೇಕಾಯಿತು. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ದರಿದ್ದೇವೆ. ತಮಗೆ ಸಾಧ್ಯವಾದರೆ ಈ ಕುರಿತು ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿದರು.
ಮೀಸಲು ಕ್ಷೇತ್ರ, ಮೀಸಲು ಕ್ಷೇತ್ರ ಎಂದು ಬೊಬ್ಬೆ ಹೊಡೆಯುವ ಗೋವಿಂದ ನಾಯಕರವರಿಗೆ ಮೀಸಲು ಎಂದರೆ ಪ್ರಾತಿನಿಧ್ಯವೇ ಹೊರತು ಪಟ್ಟಾಭಿಷೇಕವಲ್ಲ ಎಂದು ಡಿಜಿ ಗುರಿಕಾರ ಹೇಳಿದರು. ಮೀಸಲು ಕ್ಷೇತ್ರದಲ್ಲಿ ಮೀಸಲು ಪಡೆದವರಿಗೆ ಮಾತ್ರ ಹಕ್ಕು ಅಧಿಕಾರ ಇಲ್ಲವೇ? ಅವರಿಗೆ ಎಷ್ಟು ಹಕ್ಕು ಅಧಿಕಾರ ಇದೆಯೋ ಅಷ್ಟೇ ಹಕ್ಕು ಅಧಿಕಾರ ಸಾಮಾನ್ಯ ಜನರಿಗೂ ಇದೆ. ನಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಮಾಡುವ ಅಧಿಕಾರವಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅದನ್ನು ಅರಿತು ಮಾತನಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಭೂಪನಗೌಡ ಕರಡಕಲ್, ಗುಂಡಪ್ಪ ನಾಯಕ, ಹನಿಸ್ ಪಾಷಾ, ಶರಣಪ್ಪ ಚಲುವಾದಿ, ಜಗದೀಶ್ ಗೌಡ, ಮಲ್ಲಯ್ಯ, ಈರಪ್ಪ ಗೌಡೂರು ಸೇರಿ ಹಲವರು ಉಪಸ್ಥಿತರಿದ್ದರು.







