ಎಲ್ಲಿಯವರಗೆ ಜನರ ಆರ್ಶೀವಾದ ಇರುತ್ತದೆಯೋ ಅಲ್ಲಿಯವರಗೆ ಅಧಿಕಾರ ಇರುತ್ತದೆ: ಸಚಿವ ಬೈರತಿ ಸುರೇಶ್

ರಾಯಚೂರು: ಎಲ್ಲಿಯವರೆಗೆ ಜನರ ಆರ್ಶೀವಾದ ಇರುತ್ತದೆಯೋ ಅಲ್ಲಿಯವರೆಗೆ ಅಧಿಕಾರ ಇರುತ್ತದೆ. ಅಧಿಕಾರ ಇರುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆರ್ಶೀವಾದ ಇಲ್ಲವಾದರೆ, ಸರ್ಕಾರವೂ ಇರಲ್ಲ, ಸಚಿವ ಸ್ಥಾನವೂ ಇರುವುದಿಲ್ಲ ಎಂದು ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅಧಿಕಾರ ಶಾಶ್ವತವಲ್ಲ ಎಂದು ನೀಡಿರುವ ಹೇಳಿಕೆಯಲ್ಲಿ ಯಾವುದೇ ವೈರಾಗ್ಯವಿಲ್ಲ ಎಂದು ಅವರು ಹೇಳಿದರು.
ಎಲ್ಲಿಯವರಗೆ ಜನರ ಆರ್ಶೀವಾದ ಇರುತ್ತದೆಯೋ ಅಲ್ಲಿಯವರಗೆ ಅಧಿಕಾರ ಇರುತ್ತದೆ. ಎಲ್ಲವೂ ಹೈ ಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದರು.
ಸಾಕಷ್ಟು ಬಾರಿ ಬ್ರೇಕ್ ಫಾಸ್ಟ್, ಲಂಚ್ ಮೀಟಿಂಗ್‍ಗಳು ನಡೆಯುತ್ತವೆ. ಸಿಎಂ ಮತ್ತು ಡಿಸಿಎಂ ಸೇರಿದಂತೆ ಅನೇಕರು ಮಾಡುತ್ತಾರೆ. ಸರ್ಕಾರ ಸೂಸೂತ್ರವಾಗಿ ನಡೆಯುತ್ತಿದೆ. ಯಾರು ಏನೇ ಹೇಳಿದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಈ ಸಂದರ್ಭ ಆರ್‍ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಶಾಸಕ ಆರ್.ಬಸವನಗೌಡ ತುರ್ವಿಹಾಳ ಇದ್ದರು.







