ರಾಯಚೂರು ಬಿಇಒ ಆಗಿ ರಾಧಾದೇವಿ ನೇಮಕ

ರಾಯಚೂರು: ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ (ಬಿಇಒ) ರಾಧಾದೇವಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ.
ರಾಧಾದೇವಿ ಅವರು ಈ ಹಿಂದೆ ದೇವದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಯಚೂರಿನ ಬಿಇಒ ಆಗಿದ್ದ ಈರಣ್ಣ ಕೋಸಗಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ರಾಧಾದೇವಿ ಅವರನ್ನು ನೇಮಕ ಮಾಡಲಾಗಿದೆ.
ಈರಣ್ಣ ಕೋಸಗಿ ಅವರನ್ನು ಯರಮರಸ್ನ ಡಯಟ್ ಸಂಸ್ಥೆಯ ಉಪನ್ಯಾಸಕರ ಖಾಲಿ ಹುದ್ದೆಗೆ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.
Next Story




