ರಾಯಚೂರು | ಮಾ.3, 4ರಂದು ಚನ್ನಬಸವಶಿವಯೋಗಿಗಳ ಜಾತ್ರೆ; ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ತಹಶೀಲ್ದಾರ್ ಸುರೇಶ್ ವರ್ಮ ಸೂಚನೆ
ರಾಯಚೂರು : ತಾಲೂಕಿನ ಬುರ್ದಿಪಾಡ ಸುಕ್ಷೇತ್ರ ನಾರದಗಡ್ಡೆಯ ಮಠದಲ್ಲಿ ಶ್ರೀ ಚನ್ನಬಸವಶಿವಯೋಗಿಗಳ ಜಾತ್ರೆ ಮಹೋತ್ಸವ ಕಾರ್ಯಕ್ರಮವು ಮಾ.3 ಹಾಗೂ 4ರಂದು ನಡೆಯಲಿದ್ದು, ನಾರದಗಡ್ಡೆಯ ಮಠದ ನದಿಯಲ್ಲಿ ಮೊಸಳೆಗಳು ಇರುವ ಕಾರಣ ನದಿಗೆ ಸಾರ್ವಜನಿಕರಿಗೆ ಅಥವಾ ಭಕ್ತಾಧಿಗಳು ಸ್ನಾನಕ್ಕಾಗಿ ಇಳಿಯದಂತೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ಸೂಚಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ಮಾ.3ರಿಂದ 4ರವರೆಗೆ ಬುರ್ದಿಪಾಡ ಸುಕ್ಷೇತ್ರ ನಾರದಗಡ್ಡೆಯ ಮಠದಲ್ಲಿ ಶ್ರೀಚನ್ನಬಸವಶಿವಯೋಗಿಗಳ ಅವರ ಜಾತ್ರೆ ಮಹೋತ್ಸವ ಹಾಗೂ ಇತರೆ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಸಾವಿರಾರು ಭಕ್ತಾಧಿಗಳು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ನದಿಯಲ್ಲಿ ಸ್ಥಾನಕ್ಕಾಗಿ ಹೋಗಬಾರದು.ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಕಡ್ಡಾಯವಾಗಿ ಬೋಟಿನಲ್ಲಿ ಪ್ರಯಾಣ ಮಾಡಬೇಕು. ಅಲ್ಲದೆ ಭಕ್ತಾಧಿಗಳು ಹಾಗೂ ಸಾರ್ವಜನಿಕರು ನೀರಿನಲ್ಲಿ ಕೈಗಳನ್ನು ಹಾಕದಂತೆ ಎಚ್ಚರ ವಹಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕು ಆಡಳಿತದೊಂದಿಗೆ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.





