ರಾಯಚೂರು | ಪಾಲಿಕೆಯ ಅಧ್ಯಕ್ಷರ ಕಚೇರಿಯಲ್ಲಿ ಸದಸ್ಯನ ಮೇಲೆ ಹಲ್ಲೆ ಆರೋಪ : 8 ಜನರ ವಿರುದ್ದ ಪ್ರಕರಣ ದಾಖಲು

ರಾಯಚೂರು: ಮಹಾನಗರ ಪಾಲಿಕೆ ಅಧ್ಯಕ್ಷರ ಕಚೇರಿಯಲ್ಲಿ ಪಾಲಿಕೆ ಸದಸ್ಯ ಜಿಂದಪ್ಪ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯ ಅನಿತಾ ಪತಿ ತಿಮ್ಮಾರೆಡ್ಡಿ ಸೇರಿ 8 ಜನರ ವಿರುದ್ದ ಸದರ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೆ ಒಳಗಾದ ಜಿಂದಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಪೋನ್ ಕರೆ ಪಾಲಿಕೆ ಕಚೇರಿಗೆ ಆಗಮಿಸಿ ಹಲ್ಲೆ ನಡೆಸಿದ್ದು, ದೈಹಿಕ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ಲಿಖಿತ ದೂರು ಆಧರಿಸಿ ಬಿಎನ್‍ಎಸ್‍ಕಾಯ್ದೆನಡಿ 189(2), 191(2)(3), 352,115(2), 118(1), 324(4),351(2)(3)ಸಹಿತ 190 ಅನ್ವಯ ಪ್ರಕರಣ ದಾಖಲಿಸಲಾಗಿದೆ.
Next Story





