ರಾಯಚೂರು | 2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಜಿಲ್ಲಾಧಿಕಾರಿ ಖಾತೆಗೆ ಹಣ ಬಿಡುಗಡೆ

ರಾಯಚೂರು : ಅತ್ಯುನ್ನತ ಸೇವೆ, ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲು ಸರ್ಕಾರವು ತೀರ್ಮಾನಿಸಿದ್ದು, ಇಲಾಖೆ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಸರ್ಕಾರದಿಂದ ಆದೇಶಿಸಲಾಗಿತ್ತು.
ರಾಜ್ಯ ಸರ್ಕಾರದ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಸಂಬಂಧಿಸಿದಂತೆ, ಹಲವಾರು ಮಾರ್ಪಾಡು ಮಾಡಿ ಹೊಸ ಮಾರ್ಗಸೂಚಿಗಳನ್ನು ಒಳಗೊಂಡ ಆದೇಶಗಳನ್ನು ಹೊರಡಿಸಲಾಗಿದೆ.
2022ನೇ ಸಾಲಿನಿಂದ ಅನ್ವಯಿಸುವಂತೆ ಜಿಲ್ಲಾ ಮಟ್ಟದ ಸೇವಾ ಪ್ರಶಸ್ತಿಯ ಮೊತ್ತವನ್ನು ಪ್ರತಿ ಪ್ರಶಸ್ತಿಗೆ 25,000 ರೂ.ಗಳ ಮೊತ್ತವನ್ನು ನೀಡಲು ತೀರ್ಮಾನಿಸಲಾಗಿದೆ. 2023ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನಾಗಿ ಎ.21ರಂದು ಆಚರಿಸುವ ಕಾರ್ಯಕ್ರಮವನ್ನು ಜಿಲ್ಲಾಡಳಿತವು ಆಯೋಜಿಸಲು, ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
2023ನೇ ಸಾಲಿಗೆ ಸಂಬಂಧಿಸಿದ ಸರ್ವೋತ್ತಮ ಸೇವಾ ಪ್ರಶಸ್ತಿ ಮೊತ್ತವನ್ನು ಲಭ್ಯವಿರುವ ಮೊತ್ತದಿಂದ ಭರಿಸುವುದು ಹಾಗೂ ಆಯ್ಕೆ ಸಮಿತಿಯ ನಡವಳಿಯೊಂದಿಗೆ ಇತರೆ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದಲ್ಲಿ ಮೊತ್ತವನ್ನು ನಂತರ ಸರ್ಕಾರದಿಂದ ಬರಿಸಲಾಗುವುದು ಎಂದು ಆದೇಶಿಸಿದ್ದಾರೆ.
2023ನೇ ಸಾಲಿಗೆ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಸಂಬಂಧ 22 ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ನಡೆವಳಿಯನ್ನು ಕಳುಹಿಸಿ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಜಿಲ್ಲೆಯಲ್ಲಿ ಅತ್ಯುತ್ತಮ ಸರ್ವೋತ್ತಮ ಸೇವಾ ಪ್ರಶಸ್ತಿಗೆ 10 ಜನರಿಗೆ ತಲಾ 25 ಸಾವಿರದಂತೆ ಒಟ್ಟು 2.50 ಲಕ್ಷ ರೂ, ಮೊತ್ತ ಒಳಗೊಂಡಿದೆ. ಎಂದು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಕಲ್ಪನಾ ತಿಳಿಸಿದ್ದಾರೆ.







