Raichur | ಸೂರ್ಯಕಾಂತಿ ಉತ್ಪನ್ನ ಖರೀದಿ ಕೇಂದ್ರ ಸ್ಥಾಪನೆ : ಜಿಲ್ಲಾಧಿಕಾರಿ ಎಸ್.ಪೂವಿತಾ
ರಾಯಚೂರು : ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರೈತರು ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎಸ್.ಪೂವಿತಾ ಅವರು ಕೋರಿದ್ದಾರೆ.
ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಎಕರಿಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ಗೆ 7,721ರೂ.ಗಳಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು. ದಿನಾಂಕ 07-05-2026 ರಿಂದ ರೈತರ ನೊಂದಣಿ ಕಾಲಾವಧಿಯನ್ನು 50 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 60 ದಿನಗಳವರೆಗೆ ನಿಗದಿಪಡಿಸಿದೆ.
ಖರೀದಿ ಕೇಂದ್ರಗಳು: ರಾಯಚೂರು ತಾಲೂಕಿನ ಹುಣಸಿಹಾಳ ಹುಡಾ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಷಣ್ಮುಖ ಜಿ. ಮೊಬೈಲ್ ಸಂಖ್ಯೆ: 9743695467, ದೇವದುರ್ಗ ತಾಲೂಕಿನ ಜಾಲಹಳ್ಳಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ನರಸಿಂಗ ನಾಯಕ ಮೊಬೈಲ್ ಸಂಖ್ಯೆ: 7899312989, ಲಿಂಗಸಗೂರು ತಾಲೂಕಿನ ಮಟ್ಟೂರು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಮಲ್ಲಿಕಾರ್ಜುನ ದೇಸಾಯಿ ಮೊಬೈಲ್ ಸಂಖ್ಯೆ: 7337773317, ಹಟ್ಟಿ ರಾಷ್ಟ್ರೀಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಸಾಗರ್ ಮೊಬೈಲ್ ಸಂಖ್ಯೆ: 9980903420, ಮಸ್ಕಿ ತಾಲೂಕಿನ ಮೆದಕಿನಾಳ ರಾಷ್ಟ್ರೀಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಕೊಟ್ರಪ್ಪ ಮೊಬೈಲ್ ಸಂಖ್ಯೆ: 9663704929, ಸಿಂಧನೂರು ತಾಲೂಕಿನ ಜವಳಗೇರಾ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ದೇವರಾಜ ಮೊಬೈಲ್ ಸಂಖ್ಯೆ: 9964165509, ಹುಡಾ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಚನ್ನನಗೌಡ ಮೊಬೈಲ್ ಸಂಖ್ಯೆ: 9964315868, ಪಗಡದಿನ್ನಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಮಲ್ಲಿಕಾರ್ಜುನ ಮೊಬೈಲ್ ಸಂಖ್ಯೆ: 9945738297, ಮಾನವಿ ತಾಲೂಕಿನ ತೋರಣದಿನ್ನಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಬಸಯ್ಯ .ಟಿ ಮೊಬೈಲ್ ಸಂಖ್ಯೆ: 9902387316, ಸಿರವಾರ ತಾಲೂಕಿನ ಸಿರವಾರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ನಿಂಬಯ್ಯ ಸ್ವಾಮಿ ಮೊಬೈಲ್ ಸಂಖ್ಯೆ: 9880891919, ಹರವಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ವೀರೇಶ್ ಮೊಬೈಲ್ ಸಂಖ್ಯೆ: 7899964173ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ರೈತರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರಕಾರದ ಯೋಜನೆಯ ಸದುಪಯೋಗ ಪರಿಡಿಸಕೊಳ್ಳುವಂತೆ ಜಿಲ್ಲೆಯ ರೈತರಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿ ಎಸ್.ಪೂವಿತಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.







