ರಾಯಚೂರು | ಕ್ಷುಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಜಗಳ : ದ್ವಿಚಕ್ರ ವಾಹನಕ್ಕೆ ಬೆಂಕಿ, ಪ್ರಕರಣ ದಾಖಲು

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ರಾಯಚೂರು ನಗರದ ತಿಮ್ಮಾಪೂರಪೇಟೆ ಮತ್ತು ಬೇಸ್ತವಾರಪೇಟೆ ಬಡಾವಣೆಯ ಎರಡು ಗುಂಪಿನ ನಡುವೆ ಜಗಳ ನಡೆದು ಸ್ಕೂಟಿಗೆ ಬೆಂಕಿ ಹಚ್ಚಿದ ಘಟನೆ ಭಾನುವಾರ ನಡೆದಿದೆ.
ರಾತ್ರಿ ತಿಮ್ಮಾಪೇಟೆ ಮತ್ತು ಬೇಸ್ತವಾರಪೇಟೆಯ ಯುವಕರ ಗುಂಪಿನ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಉಂಟಾಗಿದೆ, ಈ ವೇಳೆ ಸ್ಕೂಟಿಯ ಮೇಲೆ ಕಲ್ಲು ಹಾಕಿ ಜಖಂ ಗೊಳಿಸಿದ್ದಾರೆ. ಬಳಿಕ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದ ನೇತಾಜಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನಡೆಸಿದ್ದಾರೆ. ಹಲ್ಲೆ ಮಾಡಿರುವ ಕುರಿತು ದೂರು ದಾಖಸಿಲಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ನೇತಾಜಿ ನಗರ ಪೋಲಿಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
Next Story





