ರಾಯಚೂರು | ಎತ್ತಿನ ಗಿರ್ಕಿ ಬಂಡಿ ಸ್ಪರ್ಧೆಗೆ ಅಭಿನವ ಶ್ರೀ ಚಾಲನೆ

ರಾಯಚೂರು : ಸಿರವಾರ ತಾಲೂಕಿನ ನವಲಕಲ್ ಗ್ರಾಮದಲ್ಲಿ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಎತ್ತಿನ ಗಿರ್ಕಿ ಬಂಡಿ ಸ್ಪರ್ಧೆಗೆ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಆರೋಗ್ಯಕರ ರಾಸುಗಳನ್ನು ಸಾಕಲು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎತ್ತಿನ ಗಿರ್ಕಿ ಬಂಡಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತಿದ್ದು, ಯುವ ಪಿಳಿಗೆ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಯುವಕರಿಗೆ ಕರೆ ನೀಡಿದರು.
ಸ್ಪರ್ಧೆಯಲ್ಲಿ ಒಟ್ಟು 18 ಜೋಡಿಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ ಕಿಚ್ಚಾ ಬಾಯ್ಸ್ ನವಲಕಲ್ಲು, ದ್ವಿತೀಯ ಬಹುಮಾನ ದೇವರಾಜ ಆಕಲಕುಂಟೆ, ತೃತೀಯ ಬಹುಮಾನ ಎನ್.ಜಿ ಕಿಚ್ಚ ನಾಯಕ ನವಲಕಲ್ಲು, ನಾಲ್ಕನೇ ಬಹುಮಾನ ಅಮರೇಶ ಕುರುಕುಂದಾ, ಐದನೇ ಬಹುಮಾನ ಬಸ್ಸಪ್ಪ ಇಳಿಗೇರ ಆಕಳಕುಂಪೆ ಪಡೆದರು.
ಸ್ಪರ್ಧೆಯಲ್ಲಿ ನವಲಕಲ್ಲು, ಸಿರವಾರ, ಮಲ್ಲಟ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.







