ರಾಯಚೂರು | ಆಕಸ್ಮಿಕ ಬೆಂಕಿ ಅವಘಡ; ತಂಬಾಕು ಬೆಳೆನಾಶ

ರಾಯಚೂರು : ತಾಲೂಕಿನ ವೈ.ಮಲ್ಲಾಪೂರ ಗ್ರಾಮದಲ್ಲಿ ತಂಬಾಕು ಬೆಳೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ವೈ.ಮಲ್ಲಾಪೂರ ಗ್ರಾಮದ ರೈತ ಮುನಿಚಂದ್ರ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ತಂಬಾಕಿ ಬೆಳೆ ರಾಶಿ ಮಾಡಲಾಗಿತ್ತು. 4ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿದ್ದರು. ಕಿಡಿಗೇಡಿಗಳು ಧೂಮಪಾನ ಮಾಡಿ ರಸ್ತೆ ಬದಿ ಎಸೆದಿದ್ದರಿಂದ ಕಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ರಸ್ತೆ ಮಧ್ಯೆ ಬೆಳೆಯ ರಾಶಿ ಇರುವ ಕಾರಣ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.
ಸಾಲಸೋಲಮಾಡಿ ತಂಬಾಕು ಬೆಳೆಯಲಾಗಿತ್ತು, ಉತ್ತಮ ಫಸಲು ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ಕಟಾವು ಮಾಡಿ ಜಮೀನುನಲ್ಲಿಯೇ ರಾಶಿ ಮಾಡಿದ್ದ, ಈಗ ಸುಮಾರು ಒಂದು ಲಕ್ಷ ರೂ. ಬೆಳೆ ನಾಶವಾಗಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Next Story







