ರಾಯಚೂರು: ಎಲೆಕ್ಟ್ರಿಕಲ್ ಬೈಕ್ ಗೆ ಆಕಸ್ಮಿಕ ಬೆಂಕಿ; ನಾಲ್ಕು ಬೈಕ್‌ಗಳು ಭಸ್ಮ

ರಾಯಚೂರು: ಮನೆಯ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಪಕ್ಕದ ಬೈಕ್ ಗಳಿಗೆ ತಗುಲಿ ನಾಲ್ಕು ಬೈಕ್ ಗಳು ಸುಟ್ಟು ಭಸ್ಮವಾದ ಘಟನೆ ನಗರದ ಆಶಾಪುರ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಗೋವಿಂದ ಎಂಬವರಿಗೆ ಸೇರಿದ್ದ ಬೈಕ್ ಚಾರ್ಜಿಂಗ್ ಇಟ್ಟಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
Next Story





