ರಾಯಚೂರು | ಸರಕಾರಿ ಜಮೀನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು : ವಿದ್ಯಾ ಪಾಟೀಲ

ರಾಯಚೂರು: ತಾಲೂಕಿನ ಜೇಗರಕಲ್ ಗ್ರಾಮದ ಮುಖ್ಯ ರಸ್ತೆ ಪಕ್ಕದ ಸರ್ವೆ ನಂ.198 ಸರಕಾರಿ ಗಾಣಿಗರ ಗಡ್ಡೆ ಬಸ್ ನಿಲ್ದಾಣ ಬಗಲು ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿದ್ದು, ಈ ಕೂಡಲೇ ತೆರವಿಗೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಖಾಲಿ ಲೋಟಾ ಹಿಡಿದು ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಜಾಥ ನಡೆಸಲಾಗುವುದು ಎಂದು ಕರ್ನಾಟಕ ಜನಶಕ್ತಿ, ಸ್ತ್ರೀಶಕ್ತಿ ಮತ್ತು ಕೂಲಿಕಾರರ ಸಂಘಟನೆ ಜಿಲ್ಲಾ ಸಂಚಾಲಕ ವಿದ್ಯಾ ಪಾಟೀಲ ತಿಳಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಹಿಳೆಯರು ಸಾಮೂಹಿಕ ಬಯಲು ಶೌಚಾಲಯಕ್ಕೆ ಉಪಯೋಗಿಸಿಕೊಂಡು ಬಂದಿರುವ ಈ ಜಾಗವನ್ನು ಜನಪ್ರತಿನಿಧಿಗಳು, ಬಲಾಡ್ಯ ಶಕ್ತಿಗಳು ಅಕ್ರಮಕೂಟ ಕಟ್ಟಿಕೊಂಡು ಜಾಗ ಆಕ್ರಮಣ ಮಾಡಿದ್ದಾರೆ. ಅಲ್ಲಿ ಬೆಳೆದಿದ್ದ ಗಿಡ-ಗಂಟಿ ತೆರವುಗೊಳಿಸಿ, ಬಯಲು ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರವಾಗಿ ವಿಳಂಬ ಧೋರಣೆ ಅನುಸರಿಸಿದ್ದೇ ಆದಲ್ಲಿ ಖಾಲಿ ಲೋಟಾ ಹಿಡಿದು ಡಿಸಿ ಕಚೇರಿಗರೆಗೆ ಕಾಲ್ನಡಿಗೆ ಜಾಥ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಆಂಜನೇಯ್ಯ ಕುರುಬದೊಡ್ಡಿ, ಜಿಂದಮ್ಮ, ಲಕ್ಷ್ಮೀ, ಅಂಗಡಿ ಜಿಂದಮ್ಮ, ಶಾಂಭವಿ, ಮಾರೆಮ್ಮ, ಬಂಗಾರಿ ನರಸಿಂಹಲು ಇದ್ದರು.





