ರಾಯಚೂರು | ಕಲಬೆರಕೆ ಶೇಂದಿ ಮಾರಾಟ; ಇಬ್ಬರು ಆರೋಪಿಗಳ ಬಂಧನ

ರಾಯಚೂರು: ರಾಯಚೂರು ಕೇಂದ್ರ ರೈಲ್ವೇ ನಿಲ್ದಾಣದ ಮೂಲಕ ನಗರಕ್ಕೆ ಅಕ್ರಮವಾಗಿ ಕಲಬೆರಕೆ ಶೇಂದಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿ, 30 ಲೀಟರ್ ಶೇಂದಿ ವಶಪಡಿಸಿಕೊಂಡಿದ್ದಾರೆ.
ನಗರದ ರೈಲ್ವೇ ಸ್ಟೇಷನ್ ಏರಿಯಾದಲ್ಲಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕರು, ಉಪ ಅಧೀಕ್ಷಕರ ತಂಡ ಗಸ್ತು ತಿರುಗುತ್ತಿರುವಾಗ ಮಂಗಳವಾರಪೇಟೆಯ ಕರಿಯಪ್ಪ ಹಾಗೂ ಇಂದಿರಾನಗರದ ಖಾಜಾ ಎಂಬುವವರು ಅಕ್ರಮವಾಗಿ ಶೇಂದಿ ಸಾಗಾಟ ಮಾಡುವಾಗ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
Next Story