Raichur | ಕೃಷಿಕರ ಕೋಟಾದಡಿ ಕೃಷಿ ಪದವಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ರಾಯಚೂರು: ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವಿಷಯಗಳಿಗೆ ಶೇ.50ರಷ್ಟು ಸೀಟುಗಳ ಮೀಸಲಾತಿಗಾಗಿ ನಡೆಸಲಾದ ‘ಕೃಷಿಕರ ಕೋಟಾದಡಿ ಕೃಷಿ ಪದವಿಯ ಪ್ರಾಯೋಗಿಕ ಪರೀಕ್ಷೆ’ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಒಟ್ಟು 1,537 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪ್ರಾಯೋಗಿಕ ಪರೀಕ್ಷೆ ಬರೆದರು.
ಪರೀಕ್ಷೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಅಗತ್ಯ ಸೌಲಭ್ಯಗಳು ಹಾಗೂ ಸೂಕ್ತ ವ್ಯವಸ್ಥೆಗಳೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ, ಶಿಕ್ಷಣ ನಿರ್ದೇಶಕ ಗುರುರಾಜ ಸುಂಕದ, ಆಡಳಿತಾಧಿಕಾರಿ ಜಾಗೃತಿ ದೇಶಮಾನ್ಯ, ಡೀನ್ (ಕೃಷಿ ತಾಂತ್ರಿಕತೆ) ಮಲ್ಲಿಕಾರ್ಜುನ ಅಯ್ಯನಗೌಡರ್, ಡೀನ್ (ಕೃಷಿ) ಪ್ರಭುರಾಜ ಎ., ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ರಾಜಣ್ಣ, ಸಾವಯವ ಕೃಷಿ ಸಂಸ್ಥೆಯ ಮುಖ್ಯಸ್ಥ ಬಸವಣ್ಣೆಪ್ಪ ಸೇರಿದಂತೆ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.
Next Story




