ರಾಯಚೂರು| ಮದರಸಾದಲ್ಲಿ ಬಾಲಕನಿಗೆ ಹಲ್ಲೆ ಆರೋಪ: ಮುಖ್ಯ ಶಿಕ್ಷಕನ ಬಂಧನ

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಮದರಸಾ ದಾರುಲ್ ಹುಫ್ಫಾಜ್ ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಓರ್ವ ಶಿಕ್ಷಕನನ್ನು ಬಂಧಿಸಲಾಗಿದೆ.
ಅಬ್ಬಾಸ್ ಅಲಿ ಬಂಧಿತ ಶಿಕ್ಷಕ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಲಕ ಪೋಷಕರು ನವೆಂಬರ್ 9ರಂದು ಕವಿತಾಳ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ದೂರಿನಂತೆ ಮದರಸಾ ದಾರುಲ್ ಹುಫ್ಫಾಜ್ ಶಾಲೆಯ ಮುಖ್ಯ ಶಿಕ್ಷಕ ಹಜಾಮ್ ಮುಮುರಿ, ಅಬ್ಬಾಸ್ ಅಲಿ, ಹುಸೇನ್ ಮುಮುರಿ, ಜಾಯಿದ್, ಖುದ್ರತುಲ್ಲಾ ಹಾಗೂ ಇಮ್ರಾನ್ ಶೇಖ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




