ರಾಯಚೂರು | ಅಮರಶಿಲ್ಪಿ ಜಕಣಚಾರಿ ಅವರು ಭಾರತೀಯ ವಾಸ್ತುಶಿಲ್ಪವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ: ತಹಶೀಲ್ದಾರ್ ಸುರೇಶ ವರ್ಮ

ರಾಯಚೂರು: ಅಮರಶಿಲ್ಪಿ ಜಕಣಾಚಾರಿ ಅವರು ಭಾರತೀಯ ವಾಸ್ತುಶಿಲ್ಪ ಕಲೆಯ ವಿಶೇಷತೆಯನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಭಾರತದ ಕಡೆ ಜಾಗತಿಕ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ತಹಶೀಲ್ದಾರ್ ಸುರೇಶ್ ವರ್ಮಾ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ವಾಸ್ತುಶಿಲ್ಪ ಕಲೆಯು ಇತಿಹಾಸವನ್ನು ಸೃಷ್ಟಿಸಿದೆ. ಇಂದು ದೇಶ-ವಿದೇಶಗಳಿಂದ ಭಾರತೀಯ ವಾಸ್ತುಶಿಲ್ಪವನ್ನು ಅಧ್ಯಯನ ಮತ್ತು ಸಂಶೋಧನೆ ಮಾಡಲು ವಿದ್ವಾಂಸರು ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಉಪನ್ಯಾಸರಾಗಿ ಪ್ರಾಧ್ಯಾಪಕಿ ಡಾ. ಸವಿತಾ ಪಂಪಾಪತಿ ಬಡಿಗೇರ್ ಅವರು ಮಾತನಾಡಿ, ಪ್ರತಿಯೊಂದು ಕಲ್ಲಿನಲ್ಲಿ ಜೀವಂತಿಕೆ ಕಾಣಲು ತೋರಿಸಿಕೊಟ್ಟವರು ಅಮರಶಿಲ್ಪಿ ಜಕಣಾಚಾರಿ. ಅವರ ಜೀವನ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮದಾನೆಗುಂದಿ ಸರಸ್ವತಿ ಸಂಸ್ಥಾನ ಮೂಲ ಪೀಠದ ವಿಶ್ವಕರ್ಮ ಶ್ರೀಮದ್ ಮೌನೇಶ್ವರ ಮಹಾಸ್ವಾಮಿಗಳು, ಸೂರ್ಯನಾರಾಯಣ ಮಹಾ ಸ್ವಾಮಿಗಳು, ಬ್ರಹ್ಮ ಗಣೇಶ, ರಾಮು ಗಾಣದಾಳ, ಮಾರುತಿ ಬಡಿಗೇರ್, ಡಾ.ವೆಂಕಟೇಶ, ಬ್ರಹ್ಮಯ್ಯ, ಈಶ್ವರ, ನಾಗರಾಜ ಪತ್ತರ್, ಮಹೇಶ ಮಿಲಿಟರಿ, ಜನಾರ್ದನ, ಭೀಮಯ್ಯ, ಮಾನಪ್ಪ ಬಡಿಗೇರ್, ರವಿ ಕುಮಾರ, ಜನಾರ್ದನ, ಡಾ.ಅರುಣಾ ಮಸ್ಕಿ, ಈರಣ್ಣ, ಸೇರಿದಂತೆ ಅನೇಕರು ಇದ್ದರು.







