ರಾಯಚೂರು | ಜ.14, 15ರಂದು ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಸ್ವಾಮೀಜಿ

ರಾಯಚೂರು : ನಿಜಶರಣ ಆಂಬಿಗರ ಗುರುಪೀಠದಲ್ಲಿ ಜ.14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ರಥೋತ್ಸವ, ಶ್ರೀನಿಜಶರಣ ಅಂಬಿಗರ ಚೌಡಯ್ಯ ಶಿಲಾ ಮಂಟಪ, ಕಂಚಿನ ಪುತ್ಥಳಿ ಅನಾವರಣ, ಶ್ರೀ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುಕ್ಷೇತ್ರ ನರಸೀಪುರುದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿಉದ್ದೇಶಿಸಿ ಮಾತನಾಡಿ, ಜ.14 ರಂದು ನಿಜಶರಣ ಅಂಬಿಗರ ಚೌಡಯ್ಯನವ ತೊಟ್ಟಿಲೋತ್ಸವ, ಬೆಳಿಗ್ಗೆ 8 ಗಂಟೆಗೆ ಅಂಬಿಗರಚೌಡಯ್ಯಯ ಐಕ್ಯಮಂಟಪ ಪೂಜೆ, ಸಾಮೂಹಿಕ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಶ್ರೀ ಲಿಂಗೈಕ್ಯ ಸದ್ಗೂರು ಶ್ರೀ ಶಾಂತಮುನಿ ಮಹಾಸ್ವಾಮೀಜಿಗಳ 10ನೇ ವರ್ಷ ಪುಣ್ಯ ಸ್ಮರಣೆ, ಮಧ್ಯಾಹ್ನ 12 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಾಪುರಸ್ಕಾರ, ವಚನ ಕಂಠಪಾಠ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಜ.15 ರಂದು ಬೆಳಿಗ್ಗೆ ಧ್ವರ್ಮ ಧ್ವಜಾರೋಹಣ, ಬೆಳಿಗ್ಗೆ 10 ಗಂಟೆಗೆ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಶಿಲಾ ಮಂಟಪ, ಕಂಚಿನ ಪುತ್ಥಳಿ ಅನಾವರಣ, ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರು ಸೇರಿದಂತೆ ಅನೇಕ ಸಚಿವರು, ಸಂಸದರು, ಶಾಸಕರುಗಳನ್ನು ಆಹ್ವಾನಿಸಲಾಗಿದೆ.
ಶ್ರೀ ಅಂಬಿಗರ ಚೌಡಯ್ಯನವರ 906 ಜಯಂತ್ಯೋತ್ಸವ, ಮಧ್ಯಾಹ್ನ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿಗಳ ಪೀಠಾರೋಹಣ ದಶಮಾನೋತ್ಸವ ಹಾಗೂ ಸಂಜೆ 5 ಗಂಟೆಗೆ ವಚನ ಗ್ರಂಥ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಗಾಮಸ್ಥ ಸಮಾಜ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಕೆ.ಶರಣಪ್ಪ, ಕಡಗೋಳ ಆಂಜಿನೇಯ್ಯ, ಕಡಗೋಳ ಶರಣಪ್ಪ, ಜಂಬಣ್ಣ ನಿಲೋಗಲ್, ವೀರೇಶ, ಹೊನ್ನಪ್ಪಇದ್ದರು.







