ರಾಯಚೂರು | ಹಟ್ಟಿ ಚಿನ್ನದ ಗಣಿ ಕಂಪನಿಯ ಚುನಾವಣೆ ನಡೆಸಲು ಒತ್ತಾಯಿಸಿ ಮನವಿ

ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆ ನಡೆಸಬೇಕು ಎಂದು ಸೆಂಟರ್ ಅಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಂಘದ ವತಿಯಿಂದ ಕಂಪನಿ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಮೂರು ವರ್ಷದ ಅವಧಿ ಪೂರ್ಣಗೊಂಡು ಸುಮಾರು ದಿನಗಳು ಕಳೆದಿವೆ. ಅಭಿವೃದ್ಧಿ ಕುಂಠಿತಗೊಂಡಿದೆ. ಚುನಾವಣೆ ನಡೆಸಿ ಮುಂದಿನ ಕಾರ್ಯ ಚಟುವಟಿಕೆಗಳು ನಡೆಯಬೇಕು ಎಂದು ಒತ್ತಾಯಿಸಿದರು
ಈ ಬಗ್ಗೆ ಕಾರ್ಮಿಕ ಮುಖಂಡ ಅನೀಫ್ ಮಾತನಾಡಿ, ಚುನಾವಣೆಗಳನ್ನು ಸಮಯಕ್ಕೆ ತಕ್ಕಂತೆ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಚುನಾವಣೆಗಳು ಉದ್ಯೋಗಿಗಳ ಪ್ರಾತಿನಿಧ್ಯವನ್ನು ಸದೃಢಗೊಳಿಸಿ, ನಿರ್ವಹಣಾ ಮತ್ತು ಕಾರ್ಮಿಕರ ನಡುವಿನ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. ಉದ್ಯೋಗಿಗಳ ನ್ಯಾಯಯುತ ಪ್ರತಿನಿಧಿಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಂಸ್ಥೆಯೊಳಗಿನ ಪ್ರಜಾಪ್ರಭುತ್ವಾತ್ಮಕ ವ್ಯವಸ್ಥೆ ಸಕ್ರಿಯವಾಗಿರಿಸಲು ಇದು ಬಹಳ ಅಗತ್ಯವಾಗಿದೆ ಎಂದರು.
ಈ ವೇಳೆ ಕಾರ್ಮಿಕ ಮುಖಂಡ ನಿಂಗಪ್ಪ ನಿಲೋಗಲ್, ಅಲ್ಲಾಬಕ್ಷ, ಫಕ್ರುದ್ದೀನ್ ಮುಲ್ಲಾ, ವೆಂಕಟೇಶ್ ಗೋರ್ಕಲ್, ನರಸಣ್ಣ ನಾಯಕ, ಶಬ್ಬಿರ ಜಾಲಹಳ್ಳಿ ಇನ್ನಿತರರು ಹಾಜರಿದ್ದರು.





