ರಾಯಚೂರು | ಸಮುದಾಯ ಭವನ, ನೂತನ ಹೈ ಟೆಕ್ ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯಕ್ಕೆ ಮನವಿ

ರಾಯಚೂರು : ನಗರದ ಹರಿಜನವಾಡದ ಸಮುದಾಯ ಭವನ ಮತ್ತು ನೂತನ ಹೈ ಟೆಕ್ ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ನವರತ್ನ ಯುವ ಸಂಘದ ಮುಖಂಡರು ಮಹಾನಗರ ಪಾಲಿಕೆ ಮಹಾಪೌರರು ನರಸಮ್ಮ ನರಸಿಂಹಲು ಮಾಡಗಿರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಹರಿಜನವಾಡದಲ್ಲಿ ಇರುವ ಹಳೆ ಸಮುದಾಯ ಭವನವು ಸುಮಾರು ವರ್ಷಗಳಿಂದ ಇಲ್ಲಿಯ ಜನರ ಸಭೆ ಸಮಾರಂಭಗಳಿಗೆ ತುಂಬಾ ಅನುಕೂಲಕರವಾಗಿದೆ. ಅದೇ ರೀತಿ ಆಶಾ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಸಿಬ್ಬಂದಿಯವರಿಗೂ ಕೂಡಾ ಸಭೆಗಳನ್ನು ನಡೆಸಲು ಅನುಕೂಲವಾಗಿದೆ. ವಿಶೇಷವಾಗಿ ಗರ್ಭೀಣಿ ಸ್ತ್ರೀಯರಿಗೆ ಮತ್ತು ಬಾಣಂತಿಯರ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗಿದೆ. ಅಂಬೇಡ್ಕರ್ ಜಯಂತಿ, ಬಾಬು ಜಗಜೀವನ್ ಜಯಂತಿ ಮತ್ತು ಇನ್ನೂ ಹಲವಾರು ರಾಷ್ಟ್ರೀಯ ನಾಯಕರಗಳ ಜಯಂತಿ ಆಚರಣೆಗೆ ತುಂಬಾ ಅನುಕೂಲವಾಗಲಿದೆ ಎಂದರು.
ಆದರೆ ಕೆಲವು ತಿಂಗಳುಗಳಿಂದ ಈ ಒಂದು ಸಮುದಾಯ ಭವನದ ಕಿಟಕಿ ರೀಪೇರಿ, ಬಾಗಿಲು, ಫ್ಯಾನ್ ರಿಪೇರಿ, ಸಭೆ ಮಾಡಲು ಕುರ್ಚಿ, ಮತ್ತು ಟೇಬಲ್‌ಗಳ ಸಮಸ್ಯೆ ಇದೆ. ಅದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಬಗಹರಿಸಿದರೆ ಜನರಿಗೆ ತುಂಬಾ ಅನುಕೂಲವಾಗಲಿದೆ. ಅಲ್ಲದೆ, ಹರಿಜನವಾಡದ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಇರುವ ನೂತನ ಹೈ ಟೆಕ್ ಗ್ರಂಥಾಲಯದಿಂದ ಅನೇಕ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅಥವಾ ಜ್ಞಾನರ್ಜನೆಗೆ ತುಂಬಾ ಅನುಕೂಲವಾಗಿದೆ. ಸುಮಾರು ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬೆಳ್ಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರಿಗೆ ನಿರಂತರವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಅವರ ಗಮನಕ್ಕೆ ತರಲಾಯಿತು.
ಮೋಟಾರ್ ಪೈಪ್ ಲೈನ್ ಸೇರಿ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ,ಎನ್. ನಾಗರಾಜ, ಮಾರುತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







