ರಾಯಚೂರು | ಅಪರಿಚಿತ ಮೃತ ನವಜಾತ ಹೆಣ್ಣು ಶಿಶುವಿನ ವಾರಸುದಾರರ ಪತ್ತೆಗೆ ಮನವಿ
ರಾಯಚೂರು, ಆ.28 : ಇಲ್ಲಿನ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.26ರ ಸಂಜೆ 5ಗಂಟೆ ಸುಮಾರಿಗೆ ರೈಲುಗಾಡಿ ಸಂಖ್ಯೆ: 11301 ಉದ್ಯಾನ್ ಎಕ್ಸಪ್ರೆಸ್ ಹಿಂದಿನ ಜನರಲ್ ಭೋಗಿಯ ಟಾಯಲೆಟ್ ರೂಮ್ ಒಳಗಡೆ ಸುಮಾರು 2 ರಿಂದ 3 ದಿನದ ಅಪರಿಚಿತ ನವಜಾತ ಹೆಣ್ಣು ಶಿಶುವನ್ನು ಯಾರೋ ಬಿಟ್ಟು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಕುರಿತು ಠಾಯಲ್ಲಿ ಸಿಆರ್ ನಂ: 31/2025ಯು/ಎಸ್ 93ಬಿಎನ್‌ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ವಾರಸುದಾರರ ಪತ್ತೆಗೆ ಕೋರಲಾಗಿದೆ.
ಮಗುವನ್ನು ನೋಡಿದ ದೂರುದಾರರು ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತದೆ.
ಅಪರಿಚಿತ ಹೆಣ್ಣುಮಗು ವಯಸ್ಸು ಸುಮಾರು 2 ರಿಂದ 3 ದಿನಗಳು, ಎತ್ತರ ಸುಮಾರು 18 ಇಂಚು, ಸಾದಾ ಕೆಂಪು ಮೈ ಬಣ್ಣ, ತಲೆಯಲ್ಲಿ 1 ಇಂಚು ಕಪ್ಪು ಕೂದಲು, ಮಂಡ ಮೂಗು, ಕಣ್ಣುಗಳು ಮುಚ್ಚಿರುತ್ತವೆ.
ಮೃತ ಮಗುವಿನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತ ಮಗುವಿನ ಹೋಲಿಕೆಯ ಮಗು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-231716 ಅಥವಾ ಮೊಬೈಲ್ ನಂ: 9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







