ರಾಯಚೂರು | ಆಟೋರಿಕ್ಷಾ ಪಲ್ಟಿ; ಪ್ರಯಾಣಿಕ ಮೃತ್ಯು

ರಾಯಚೂರು : ದೇವದುರ್ಗ ತಾಲೂಕಿನ ಯರಗುಡ್ಡ ಗ್ರಾಮದಲ್ಲಿ ಆಟೋ ಪಲ್ಟಿಯಾಗಿ ಪ್ರಯಾಣಿಕ ನರಸಪ್ಪ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಮೃತನನ್ನು ಬೋಮ್ಮನಹಳ್ಳಿ ಗ್ರಾಮದ ನಿವಾಸಿ ನರಸಪ್ಪ (50) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ತಿಂಥಣಿ ಬ್ರಿಜ್ನಿಂದ ಜಾಲಹಳ್ಳಿ ಕಡೆಗೆ ಹೊಗುತ್ತಿದ್ದ, ಆಟೋ ಮುಂದೆ ಬಂದ ಬೈಕ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಆಟೋರಿಕ್ಷಾ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story





