ರಾಯಚೂರು | ಸಿಸಿರಸ್ತೆ ನಿರ್ಮಾಣಕ್ಕೆ ಎ.ವಸಂತಕುಮಾರರಿಂದ ಗುದ್ದಲಿ ಪೂಜೆ

ರಾಯಚೂರು: ನಗರ ವಿಧಾನಸಭಾ ಕ್ಷೇತ್ರದ ವಡವಾಟಿ ಗ್ರಾಮದಲ್ಲಿ ಕೆಕೆಆರ್‌ಡಿಬಿಯ ವತಿಯಿಂದ 10 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರಾಯಚೂರು ನಗರಕ್ಕೆ ಹತ್ತಿರವಿದ್ದರೂ ಈ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಹಂತ ಹಂತವಾಗಿ ಗ್ರಾಮದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ವಕ್ತಾರ ರಝಾಕ್ ಉಸ್ತಾದ್, ಅಬ್ದುಲ್ ಕರೀಮ, ಅಸ್ಲಂ ಪಾಶಾ, ರಮೇಶ ರೋಸ್ಲಿ, ಮುಹಮ್ಮದ ಉಸ್ಮಾನ್, ಇಕ್ಬಾಲ್ ಅಹ್ಮದ್, ಶ್ರೀನಿವಾಸ ಶಿಂಧೆ, ಆಶಪ್ಪ, ನರಸಿಂಹಲು, ಮಲ್ಲಿಕಾರ್ಜುನ, ಅಂಜಿನಕುಮಾರ, ವಡವಾಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಆಂಜನೇಯ, ಗ್ರಾಮದ ಮುಖಂಡರಾದ ಅಕ್ಬರ್ ಪಾಷಾ, ಹನುಮಂತ, ಕೆಸಿಬಿ ನರಸಣ್ಣ, ತಿಮ್ಮಪ್ಪ ಉಪಸ್ಥಿತರಿದ್ದರು.
Next Story





