Raichur : ಚರಂಡಿಯೊಳಗೆ ಮೊಸಳೆ ಮರಿ ಪತ್ತೆ

ರಾಯಚೂರು: ನಗರದ ಜಲಾಲ್ ನಗರದ ಚರಂಡಿ ಯೊಳಗೆ ಶನಿವಾರ ರಾತ್ರಿ ಮೊಸಳೆ ಮರಿಯೊಂದು ಪತ್ತೆಯಾಗಿದೆ.
ಜಲಾಲ್‌ನಗರದ ಕೌನ್ಸಿಲರ್ ತಿಮ್ಮಾರೆಡ್ಡಿ ಅವರ ಮನೆಯ ಹತ್ತಿರದ ಚರಂಡಿಯಲ್ಲಿ ಮೊಸಳೆ ಪತ್ತೆಯಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಸಳೆ ಮರಿ ಮಳೆ ನೀರಿನಲ್ಲಿ ಹರಿದು ಬಂದು ಚರಂಡಿ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ಮೊಸಳೆ ಮರಿಯನ್ನು ಕೃಷ್ಣಾನದಿಯಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.
Next Story





