ರಾಯಚೂರು | ಯದ್ಲಾಪುರ ಗ್ರಾಮದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ

ರಾಯಚೂರು: ಶಿಶು ಅಭಿವೃದ್ಧಿ ಯೋಜನೆ ಗಿಲ್ಲೇಸೂಗೂರು ವ್ಯಾಪ್ತಿಯಲ್ಲಿ ಬರುವ ಯದ್ಲಾಪುರ್ ಮೂರನೇ ಕೇಂದ್ರದಲ್ಲಿ ಇಂದು ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಮನ್ಸೂರ್ ಅಹ್ಮದ್ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಅಮರಮ್ಮ ಬಿ.ಪಾಟೀಲ್, ಮಕ್ಕಳು, ಕಿಶೋರಿಯರು, ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
Next Story





