ರಾಯಚೂರು | ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕ ನಾಪತ್ತೆ : ತಾಯಿಯಿಂದ ಅಪಹರಣ ಕೇಸ್ ದಾಖಲು

ವಿಷ್ಣುನಾಯಕ
ರಾಯಚೂರು: ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ 9 ವರ್ಷದ ಬಾಲಕ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಪತ್ತೆಯಾದ ಬಾಲಕ ರಾಯಚೂರು ತಾಲೂಕಿನ ಜುಲಮಗೇರಾ ತಾಂಡದ ನಾಗಲಕ್ಷ್ಮಿ ಅವರ ಪುತ್ರ 9 ವರ್ಷದ ವಿಷ್ಣುನಾಯಕ ಎಂದು ತಿಳಿದು ಬಂದಿದೆ.
ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಗನನ್ನು ಅಪಹರಣ ಮಾಡಲಾಗಿದೆ ಎಂದು ಬಾಲಕನ ತಾಯಿ ಪ್ರಕರಣ ದಾಖಲಿಸಿದ್ದಾರೆ.
ಮನೆಯಲ್ಲಿ ಮೊಬೈಲ್ ಚಾರ್ಜಿಂಗ್ ಇಟ್ಟು ನೋಡುತ್ತಿದ್ದ ಸಮಯದಲ್ಲಿ ವಿದ್ಯುತ್ ಸ್ಪರ್ಶಗೊಂಡು ಕೈ ಬೆರಳು ಸುಟ್ಟು ಗಾಯಗೊಂಡಿದ್ದರಿಂದ ಜೂ.17 ರಂದು ರಿಮ್ಸ್ ಬೋಧಕ ಆಸ್ಪತ್ರೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಜೂ.21 ರಾತ್ರಿ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ಬಾಲಕ ಜೂ.22 ರಂದು ಬೆಳಗಿನ ಜಾವದ ವೇಳೆಗೆ ನಾಪತ್ತೆಯಾಗಿದ್ದು, ಇದರಿಂದ ಆತಂಕಗೊಂಡ ತಾಯಿ ನಾಗಲಕ್ಷ್ಮೀ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





