ರಾಯಚೂರು | ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

ಹುಸೇನಿ ಮೃತ ಬಾಲಕ
ರಾಯಚೂರು : ಕೆರೆಯಲ್ಲಿ ಈಜಲು ತೆರಳಿದ್ದ 10 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಿರವಾರ ತಾಲ್ಲೂಕಿನ ಲಕ್ಕಂದಿನ್ನಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹುಸೇನಿ (10) ಎಂದು ಗುರುತಿಸಲಾಗಿದೆ.
ಬಾಲಕ ಲಕ್ಕಂದಿನ್ನಿ ಗ್ರಾಮದ ನಿವಾಸಿಯಾಗಿದ್ದು, ಗೆಳೆಯರ ಜೊತೆ ಈಜಲು ಹೋಗಿ ಈಜು ಬಾರದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತದೇಹವನ್ನು ಹೊರತೆಗೆದಿದ್ದು, ಸ್ಥಳಕ್ಕೆ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





