ರಾಯಚೂರು | ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೆ.7ರಂದು ರಾಯಚೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಕಾರ್ಯಕ್ರಮಗಳು ನಡೆದವು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ. ಎಸ್ ಶಿವರಾಜ ಪಾಟೀಲ್, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಎ ವಸಂತಕುಮಾರ, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು, ಬ್ರಹ್ಮಶ್ರೀ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತ್ಯುತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ನಗರದ ಎಚ್‌ಎಸ್‌ಅರ್ ಬಡಾವಣೆಯ ಮೂಲಕ ಜೈಲ್ ರಸ್ತೆ, ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣದ ಮುಂಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಾರ್ವಜನಿಕ ಉದ್ಯಾನವನದ ಮಾರ್ಗವಾಗಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಸಾಗಿತು.
ಮಹಾನಗರ ಪಾಲಿಕೆಯ ಉಪಾಧ್ಯಕ್ಷ ಸಾಜಿದ್ ಸಮೀರ್, ತಹಶೀಲ್ದಾರ್ ಸುರೇಶ ವರ್ಮ, ಮುಖಂಡರಾದ ಕೆ ಶಾಂತಪ್ಪ ಕಡಗೊಲ್, ರವಿ ಬೋಸರಾಜ್, ಸಮಾಜದ ಮುಖಂಡರಾದ ನರಸಿಂಹ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ, ಮಹಾನಗರ ಪಾಲಿಕೆಯ ವ್ಯವಸ್ಥಾಪಕ ರಾಜು, ಆರ್ಯ ಈಡಿಗ ಸಮಾಜದ ಮುಖಂಡರಾದ ಬಸವರಾಜ್ ಗೌಡ, ರಾಜನ ಗೌಡ, ಅಶೋಕ್ ಗುತ್ತೇದಾರ್, ಈರಪ್ಪ ಗೌಡ, ಅನಂತರಾಜು ಗೌಡ, ತಾಯನ ಗೌಡ, ಖಾಜನ ಗೌಡ, ರಂಗಲಿಂಗನ ಗೌಡ, ಪರಶುರಾಮ್ ಹಾಗೂ ಸಮುದಾಯದ ಹಿರಿಯರು, ಮಹಿಳೆಯರು, ಯುವಕರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮೆರವಣಿಗೆಯ ಕಳೆ ಹೆಚ್ಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿನೋದ್ ಮತ್ತು ಇಸ್ಮಾಯಿಲ್ ಅವರು ಕಲಾ ತಂಡಗಳ ನಿರ್ವಹಣೆ ಮಾಡಿದರು.
ಬಳಿಕ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಡುಪಿಯ ನಿವೃತ್ತ ಉಪನ್ಯಾಸಕ ದಯಾನಂದ.ಡಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ, ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಪರಶುರಾಮ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ, ಮುಖಂಡರಾದ ಎನ್. ಶಂಕ್ರಪ್ಪ, ಹರವಿ ನಾಗನಗೌಡ, ಆಂಜನೇಯ ಕಡಗೋಲ್, ನಾಗಿರಡ್ಡಿ, ಶ್ರೀನಿವಾಸ ರೆಡ್ಡಿ, ಶ್ರೀಕಾಂತ್ ವಕೀಲ್, ಶ್ರೀನಿವಾಸ್, ಬಸವರಾಜ ಪಾಟೀಲ್, ಎಂ.ವಿರುಪಾಕ್ಷಿ, ಖಾಜನಗೌಡ, ಚನ್ನಪ ನಾಗೋಲಿ, ಪರಶುರಾಮ, ನರಸನಗೌಡ, ಲಚ್ಚನಗೌಡ, ರಾಚನಗೌಡ, ಅಶೋಕಗೌಡ, ಈರಪ್ಪಗೌಡ, ಹನುಮಂತಪ್ಪಗೌಡ, ರಂಗಲಿಂಗನಗೌಡ, ತಾಯನಗೌಡ, ಬಸವರಾಜಗೌಡ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.







