ರಾಯಚೂರು| ಕೇಂದ್ರ ಬಸ್ ನಿಲ್ದಾಣದಲ್ಲಿ ಕಳಚಿ ಬಿದ್ದ ಮೇಲ್ಛಾವಣಿಯ ಸಿಮೆಂಟ್; ಅಪಾಯದಿಂದ ಪಾರಾದ ಪ್ರಯಾಣಿಕರು

ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮೇಲ್ಬಾವಣಿಯ ಸಿಮೆಂಟ್ ಕಳಚಿ ಬಿದ್ದ ಘಟನೆ ಸೋಮವಾರ ನಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ರವಿವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಸೋಮವಾರವೂ ಮುಂದುವರಿದಿದೆ. ಮಳೆ ನೀರಿನಿಂದ ಮೇಲ್ಚಾವಣೆ ಹಸಿಯಾಗಿ ಸಿಮೆಂಟ್ ಪದರು ಉದುರಿದೆ. ಪ್ರಾಂಗಣ 6 ರಲ್ಲಿ ಬಸ್ ಕಂಟ್ರೋಲರ್ ಕುಳಿತುಕೊಳ್ಳುವ ಸೀಟಿನ ಪಕ್ಕದಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಎರಡು ಮೂರು ವರ್ಷಗಳಿಂದ ಆಗಾಗ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದರೂ ಸಂಪೂರ್ಣ ದುರಸ್ತಿ ಮಾಡದೇ ಕೇವಲ ಅದಕ್ಕೆ ಬಣ್ಣ ಬಳಿದು ಸಾರಿಗೆ ಇಲಾಖೆಯ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಹೀಗಾಗಿ ಅಗಾಗ ಸಿಮೆಂಟ್ ಉದುರುತ್ತಿದೆ ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
Next Story







