ರಾಯಚೂರು: ಅತ್ಯಾಚಾರ-ಕೊಲೆ ಖಂಡಿಸಿ ಕ್ಯಾಂಡಲ್ ಮಾರ್ಚ್

ರಾಯಚೂರು: ಹೊಕ್ರಾಣಿ ಗ್ರಾಮದ ಅಶ್ವಿನಿ ಎಂಬ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ರಾಯಚೂರಿನ ಸಮಾಜ ಸೇವಾ ಸಂಘದ ವತಿಯಿಂದ ಎಲ್‌ಬಿಎಸ್ ನಗರ ವೃತ್ತದ ಬಳಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.
ಈ ವೇಳೆ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಈರೇಶ, ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು, ಗಂಗಪ್ಪ, ಆಸೀಫ್ ಅಲಿ, ಈರೇಶ (ಲಾರ), ಧರ್ಮರಾಜ ಮತ್ತಿತರರು ಉಪಸ್ಥಿತರಿದ್ದರು.
Next Story




