ರಾಯಚೂರು| ಗಾಂಜಾ ಸೇವನೆ, ಮಾರಾಟ: ಐವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ | PC : gemini AI
ರಾಯಚೂರು: ಸಿಂಧನೂರು ತಾಲೂಕಿನಲ್ಲಿ ಗಾಂಜಾ ಸೇವನೆ, ಮಾರಾಟಕ್ಕೆ ಸಂಬಂಧಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನವೆಂಬರ್ 29ರಂದು ನಗರದ ಯಲ್ಲಮ್ಮ ಗುಡಿ ಹತ್ತಿರ ಅಕ್ರಮವಾಗಿ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಡಿಎಸ್ಪಿ ಚಂದ್ರಶೇಖರ್ ಜಿ ನೇತೃತ್ವದ ಪೊಲೀಸರ ತಂಡ ಆರೋಪಿ ಅಹಮದ್ ರಜಾ, ಮೌನೇಶ್ ಹಾಗೂ ಅಲ್ತಾಫ್ ಎಂಬಾತನನ್ನು ಬಂಧಿಸಿದ್ದಾರೆ.
ಸಿಂಧನೂರಿನ ಕುಷ್ಟಗಿ ರಸ್ತೆಯ ವೇರ್ ಹೌಸ್ ಕ್ವಾರ್ಟರ್ಸ್ ಮಹಡಿಯ ಮೇಲುಗಡೆ ಗಾಂಜಾ ಗಿಡ ಬೆಳೆದ ಮಾಹಿತಿ ಮೇರೆಗೆ ಸಿಂಧನೂರು ನಗರ ಠಾಣೆಯ ಡಿಎಸ್ಪಿ ಚಂದ್ರಶೇಖರ್ ಜಿ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿ ಖಾದರ್ ಭಾಷ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಸಿಂಧನೂರು ನಗರದ ಹೊರವಲಯದ ಕರಿಯಪ್ಪ ಲೇಔಟ್ನ ಮಲ್ಲಯ್ಯ ದೇವಸ್ಥಾನದ ಹತ್ತಿರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೃಷ್ಣ, ಬಸವರಾಜ ಎಂಬವರನ್ನು ಬಂಧಿಸಿ ಅವರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.





