ರಾಯಚೂರು | ಕಾರು ಬೈಕ್ ನಡುವೆ ಢಿಕ್ಕಿ; ಅಪಘಾತದಿಂದ ತಪ್ಪಿಸಿಕೊಳ್ಳಲು ಜಲಾಶಯಕ್ಕೆ ಹಾರಿದ ಹಿಂಬದಿ ಸವಾರ ನೀರುಪಾಲು

ರಾಯಚೂರು: ನೆರೆಯ ಜುರಾಲಾ ಜಲಾಶಯ ಮೇಲೆ ಕಾರು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಹಿಂಬದಿ ಸವಾರ ಜಲಾಶಯಕ್ಕೆ ಹಾರಿ ನೀರುಪಾಲಾದ ಘಟನೆ ನಡಿದಿದೆ
ಜಲಾಶಯಕ್ಕೆ ಹಾರಿದ ಯುವಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಆಂಧ್ರಪ್ರದೇಶದ ಜೋಗುಳಾಂಬ ಗದ್ವಾಲ್ ಜಿಲ್ಲೆಯ ಧರೂರ್ ಮಂಡಲದ ಜುರಾಲಾ ಅಣೆಕಟ್ಟಿನಲ್ಲಿ ಭಾನುವಾರ ರಾತ್ರಿ ಅಪಘಾತ ಸಂಭವಿಸಿದೆ. ಕಾರು ಢಿಕ್ಕಿ ಹೊಡೆದ ಪರಿಣಾಮ ಯುವಕನೊರ್ವ ಜೀವ ಭಯದಿಂದ ಜಲಾಶಯಕ್ಕೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.
ಪಾಪನಪಾಡು ಮಂಡಲದ ಬುಲುಪಾಡ್ ಗ್ರಾಮದ ಮಹೇಶ್ (21) ಹಾಗೂ ಜಾನಕಿ ರಾಮುಲು ಎನ್ನುವ ಇಬ್ಬರು ಯುವಕರು ಜುರಾಲಾ ಅಣೆಕಟ್ಟನ್ನು ಭೇಟಿ ಮಾಡಲು ತೆರಳಿದ್ದರು, ಸಂಜೆ 7:30ರ ಸುಮಾರಿಗೆ ಅಣೆಕಟ್ಟು ಸೇತುವೆಯಿಂದ ಗದ್ವಾಲ್ ಕಡೆಗೆ ಹೋಗುತ್ತಿದ್ದಾಗ, ರಾಯಚೂರು ಮೂಲದ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಚಾಲಕ ಜಾನಕಿ ರಾಮುಲು ಗಾಯಗೊಂಡಿದ್ದು ಅಪಘಾತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮಹೇಶ ನೀರಿಗೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.
ಜಲಾಶಯಕ್ಕೆ ಹಾರಿದ ಮಹೇಶಗಾಗಿ ರೇಪುಲಪಾಲಂ ಪೋಲಿಸ್ ಠಾಣೆಯ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.
ಈ ಕುರಿತು ರೇಪುಲಪಾಲಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





