ರಾಯಚೂರು | ಸೈಕಲ್‌ಗೆ ಕಾರು ಢಿಕ್ಕಿ : ಮಾಜಿ ಯೋಧ ಸ್ಥಳದಲ್ಲೇ ಮೃತ್ಯು

ರಾಯಚೂರು : ಸೈಕಲ್‌ಗೆ ಕಾರು ಢಿಕ್ಕಿ ಹೊಡೆದು ಮಾಜಿ ಯೋಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಲಿಂಗಸುಗೂರು ಮಾರ್ಗದ ರಾಜ್ಯ ಹೆದ್ದಾರಿಯ ಹಳ್ಳದ ಬಸವೇಶ್ವರ ದೇವಸ್ಥಾನದ ಎದುರು ನಡೆದಿದೆ.
ಮೃತರನ್ನು ಮಾಜಿ ಯೋಧ ಶ್ರೀನಿವಾಸ (57) ಎಂದು ಗುರುತಿಸಲಾಗಿದೆ.
ಶ್ರೀನಿವಾಸ್ ಅವರು ಅಸ್ಕಿಹಾಳದಿಂದ ಸೈಕಲ್ ನಲ್ಲಿ ಪವರ್ ಗ್ರಿಡ್ ಗೆ ಕೆಲಸಕ್ಕೆ ಹೋಗುವ ವೇಳೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರು ಚಾಲಕ ಪರಾರಿಯಾಗಿದ್ದು, ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story