ರಾಯಚೂರು | ನಾಯಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು : ಓರ್ವ ಮೃತ್ಯು

ರಾಯಚೂರು: ನೆರೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದರ್ಶನಕ್ಕೆ ಬಂದು ವಾಪಸ್ ಹೋಗುವ ವೇಳೆ ಕಾರಿಗೆ ನಾಯಿ ಅಡ್ಡಬಂದಿದ್ದು, ನಾಯಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದು ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಧಾರವಾಡ ತಾಲ್ಲೂಕಿನ ಹಿಡಿಕಟ್ಟೆಯ ಸುನೀಲ್ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಮಣಿಕಂಠ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಅಭಿಷೇಕ, ಅಂಪಾಯ, ಹೈದರ್ ಹಾಗೂ ಮಂಜುನಾಥ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಧಾರವಾಡ ಮೂಲದ ಅಭಿಷೇಕ, ಹೈದರ್, ಮಂಜುನಾಥ,ಸುನಿಲ್ ರಾಯಚೂರು ಗಡಿಭಾಗದ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಮಠಕ್ಕೆ ಭಾನುವಾರ ಬಂದಿದ್ದರು. ದೇವರ ದರ್ಶನ ಪಡೆದು ಬಳ್ಳಾರಿ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವಾಗ ಕರ್ನೂಲ್ ಜಿಲ್ಲೆಯ ಕವಿತಾಳಂ ಸಮೀಪದ ವೇಗವಾಗಿ ವಾಹನ ಓಡಿಸುತ್ತಿದ್ದಾಗ ರಸ್ತೆ ಮಧ್ಯದಲ್ಲಿ ನಾಯಿಯೊಂದು ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ಕಾರು ಕಾಲುವೆಗೆ ಬಿದ್ದಿದೆ ಎಂದು ಹೇಳಲಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ದಳ ಮತ್ತು ಕೌತಾಲಂ ಪೊಲೀಸರು ಕ್ರೇನ್ ನೆರವಿನಿಂದ ಕಾರು ಹೊರಗೆ ತೆಗಿಸಿ ಉಳಿದವರ ಪ್ರಾಣ ರಕ್ಷಣೆ ಮಾಡಿದ್ದಾರೆ.
ಈ ಕುರಿತು ಕೌತಾಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







