ರಾಯಚೂರು | ಜಾತಿಗಣತಿಯು ಕೆಲವೇ ಜಾತಿಗಳಿಗೆ ಸೌಲಭ್ಯ ಕಲ್ಪಿಸುವ ಅವೈಜ್ಞಾನಿಕ ಗಣತಿಯಾಗಿದೆ : ಎನ್.ರಾಮನಗೌಡ

ರಾಯಚೂರು: ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಎಲ್ಲಾ ಜಾತಿ, ಧರ್ಮಗಳಲ್ಲಿ ಆರ್ಥಿಕವಾಗಿ ಬಡವರಿದ್ದಾರೆ. ಅವರೆಲ್ಲರಿಗೂ ಸೌಲಭ್ಯಗಳು ಸಿಗುವಂತೆ ಮಾಡುವುದು ವೈಜ್ಞಾನಿಕವಾಗಿದೆ. ಈ ಜಾತಿಗಣತಿ ಕೆಲವೇ ಜಾತಿಗಳಿಗೆ ಸೌಲಭ್ಯ ಕಲ್ಪಿಸುವ ಅವೈಜ್ಞಾನಿಕ ಜಾತಿ ಗಣತಿಯಾಗಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ರಾಮನಗೌಡ ಆರೋಪಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ, ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಮೆರವಣಿಗೆ ಅವೈಜ್ಞಾನಿಕವಾದ ಜಾತಿಗಣತಿ ರದ್ದು ಮಾಡುವಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಸಮಾಜದ ಮುಖಂಡ ಚಂದ್ರುಭೂಪಾಲ್ ನಾಡಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಶೇಖರ್ ಪಾಟೀಲ್, ಪಂಪನಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ಎನ್.ಆಮರೇಶ, ಪ್ರಭುರಾಜ್, ಶಿವುಕುಮಾರ ಜವಳಿ, ಹಂಪಯ್ಯಸ್ವಾಮಿ ರಾವಿಹಾಳ, ಮಲ್ಲನಗೌಡ, ಶಿವಬಸನಗೌಡ ಗೊರೇಬಾಳ, ಎಂ.ಲಿಂಗಪ್ಪ, ಮಲ್ಲಿಕಾರ್ಜುನ ಜೀನೂರು, ಅಮರೇಶ ಜವಳಗೇರಾ, ಚನ್ನಬಸನಗೌಡ, ಚಂದ್ರಶೇಖರ್, ವೆಂಕೋಬ ಕಲ್ಲೂರು, ಗಂಗಾಧರ ಹೂಗಾರ್, ಸಂಗನಗೌಡ ಜವಳಗೇರಾ, ಉದಯಗೌಡ, ನಾಗರಾಜ ಕಂಠಿಮಠ, ಶಿವು ಗುಂಜಳ್ಳಿ, ಶ್ರೀಧರಗೌಡ, ಸೇರಿದಂತೆ ನೂರಾರು ಸಮಾಜದ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







