ರಾಯಚೂರು | ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

ರಾಯಚೂರು: ನಗರದಲ್ಲಿ ರಾಯಚೂರು ಜಿಲ್ಲಾ ಹಾಗೂ ತಾಲ್ಲೂಕು ಹೂಗಾರ ಸಂಘದ ವತಿಯಿಂದ ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಗರದ ಹೊರವಲಯದಲ್ಲಿರುವ ನವೋದಯ ವೈದ್ಯಕೀಯ ಕಾಲೇಜು ಮುಂಭಾಗದ ಸಾವಿತ್ರಿಬಾಯಿ ಫುಲೆ ವೃತ್ತದಲ್ಲಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಸಮಾಜ ಸುಧಾರಕರು, ಶರಣರು ಹಾಗೂ ಮಹಾತ್ಮರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಟ್ಟಾಗಿ ಸ್ಮರಿಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.
ದುರ್ಬಲ ಹಾಗೂ ಶೋಷಿತ ಸಮುದಾಯಗಳಿಗೆ ಮೊದಲ ಅಕ್ಷರದ ಬೆಳಕು ನೀಡಿದ ಸಾವಿತ್ರಿಬಾಯಿ ಫುಲೆಯವರ ಸ್ಮರಣೆ ಸರಳ ಹಾಗೂ ಅರ್ಥಪೂರ್ಣ ಆಚರಣೆಯಾಗಿ ನಡೆಯಬೇಕು. ಹೂಗಾರ ಸಮಾಜವು ಇಂತಹ ಆಚರಣೆಗಳ ಮೂಲಕ ಎಲ್ಲ ಸಮುದಾಯಗಳೊಂದಿಗೆ ಶಿಸ್ತು, ಸೌಹಾರ್ದತೆ ಮತ್ತು ಒಗ್ಗಟ್ಟಿನ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೂಗಾರ ಸಮಾಜದ ಹಿರಿಯ ಉಗ್ರನರಸಿಂಹಪ್ಪ ಹೂಗಾರ ದಿನ್ನಿ, ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷ ಈರಣ್ಣ ಹೂಗಾರ, ಅಖಂಡ ಕರ್ನಾಟಕ ಹೂಗಾರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ, ರಾಯಚೂರು ತಾಲ್ಲೂಕು ಅಧ್ಯಕ್ಷ ಶಶಿಧರ ಹೂಗಾರ ಮಟಮಾರಿ, ಬಸವರಾಜ ಹೂಗಾರ ತಲಮಾರಿ, ವಕೀಲ ರವಿಕುಮಾರ್, ಮಹಾದೇವ ಹೂಗಾರ ತಲಮಾರಿ, ದಂಡಪ್ಪ ಬಿರಾದಾರ್, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಜಯಲಕ್ಷ್ಮೀ, ಶಾರದಾ, ಶಿಲ್ಪಾ ಬಿರಾದಾರ್, ಜಯಲಕ್ಷ್ಮಿ, ಸುಮಾ, ಮಹೇಶ್ವರಿ, ಲಕ್ಷ್ಮಿ, ಕಲ್ಪನಾ, ತೋಟಮ್ಮ, ಸುನಿತಾ, ಗೀತಾಂಜಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







