ರಾಯಚೂರು | ಛಲವಾದಿ ಸಂಬಂಧಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ನಮೂದಿಸಲು ಮನವಿ

ರಾಯಚೂರು: ಜಿಲ್ಲೆಯ ಛಲವಾದಿ ಸಂಬಂಧಿಸಿದ ಜಾತಿಗಳಾದ ಹೊಲೆಯ, ಬ್ಯಾಗಾರ, ಮಾಲಾ, ಮಾಲಾ ದಾಸರಿ, ಚನ್ನದಾಸರಿ ಸೇರಿದಂತೆ ಎಲ್ಲರೂ ಧರ್ಮ ಕಾಲಂನಲ್ಲಿ ‘ಬೌದ್ಧ’, ಜಾತಿ ಕಾಲಂನಲ್ಲಿ ‘ಹೊಲೆಯ’ ಎಂದು ನಮೂದಿಸಬೇಕೆಂದು ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಕೆ.ಇ. ಕುಮಾರ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೌದ್ಧ ಧರ್ಮವೆಂದು ಬರೆಯಿಸಿದರೆ ಪರಿಶಿಷ್ಟ ಜಾತಿ ಮೀಸಲು ಸಿಗುವುದಿಲ್ಲ ಎನ್ನುವ ಗೊಂದಲಕ್ಕೆ ಒಳಗಾಗಬಾರದು. ಧರ್ಮ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂನಲ್ಲಿ ಹೊಲೆಯ, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿಯನ್ನು ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.
ಅವರು ಮತ್ತಷ್ಟು ವಿವರಿಸಿ, “ಪರಿಶಿಷ್ಟ ಜಾತಿ ಒಳ ಮೀಸಲು ನೀಡುವಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರು ಪರಿಹರಿಸುವ ಭರವಸೆ ನೀಡಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಸಂಸ್ಥಾಪನ ಮಂಡಳಿ ಸದಸ್ಯ ಮಲ್ಲೇಶ ಕೊಲಮಿ, ವಿನೋದ ಸಾಗರ, ಆಂಜಿನೇಯ್ಯ ಕೊಂಬಿನ್, ಪ್ರಾಣೇಶ ಮಂಚಲ, ದೇವೇಂದ್ರ ಶಿವಂಗಿ, ಮಾರೆಪ್ಪ, ಎಂ. ಬಾಬು, ವಿ.ಕೆ ಉಪಸ್ಥಿತರಿದ್ದರು.





