ರಾಯಚೂರು | ಎರಡು ಬೈಕ್ಗಳ ನಡುವೆ ಢಿಕ್ಕಿ : ವಿದ್ಯಾರ್ಥಿ ಮೃತ್ಯು

ಸಾಂದರ್ಭಿಕ ಚಿತ್ರ
ರಾಯಚೂರು: ಹಟ್ಟಿ ಚಿನ್ನದಗಣಿ ಸಮೀಪದ ಮೇದಿನಾಪೂರ ಗ್ರಾಮದ ಹತ್ತಿರ ಎರಡು ಬೈಕ್ಗಳ ಮಧ್ಯ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಶಹಪೂರ ತಾಲೂಕಿನ ಮದ್ದರಗಿ ಗ್ರಾಮದ ಯುವಕ ಹಟ್ಟಿ ಪಟ್ಟಣದ ತನ್ನ ಅಜ್ಜಿಯ ಮನೆಯಲ್ಲಿ ಪಿಯುಸಿ ವಿದ್ಯಾಭ್ಯಾಸದ ಸಲುವಾಗಿ ಬಂದಿದ್ದನು. ಬುಧವಾರ ರಾತ್ರಿ 8:30 ಗಂಟೆಯ ಸುಮಾರಿಗೆ ಲಿಂಗಸಗೂರಿಗೆ ಬೈಕ್ನಲ್ಲಿ ತೆರಳುವಾಗ ಎದುರು ಗಡೆಯಿಂದ ಬಂದ ಬೈಕ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮಹಾದೇವ ತಂದೆ ದೇವೆಂದ್ರಪ್ಪ ಹೂಗಾರ(18) ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಗಾಯಗೊಂಡ ಇನ್ನಿಬ್ಬರು ವಿದ್ಯಾರ್ಥಿಗಳು ಹಟ್ಟಿ ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹಟ್ಟಿ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





