ರಾಯಚೂರು | ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳಿಂದ 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ
ನಂದ್ಯಾಲ ಜಿಲ್ಲೆಯ ಜೋಡೆತ್ತು ಪ್ರಥಮ ಸ್ಥಾನ

ರಾಯಚೂರು : ಕಾರ ಹುಣ್ಣಿಮೆಯ ಅಂಗವಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಎತ್ತುಗಳಿಂದ 2ಟನ್ ಭಾರದ ಕಲ್ಲುಗಳನ್ನು ಎಳೆಯುವ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ನೆರೆಯ ನಂದ್ಯಾಲ ಜಿಲ್ಲೆಯ ಸಂತಮಾಗಲೂರು ಗ್ರಾಮದ ವಜ್ರಲ ತೇಜಸ್ವಿರೆಡ್ಡಿ ಅವರ ಜೋಡಿ ಎತ್ತುಗಳು ಮೊದಲ ಸ್ಥಾನ ಪಡೆದು ರೂ.90ಸಾವಿರ ಬಹುಮಾನ ಗೆದ್ದುಕೊಂಡಿದೆ.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಬೆಳ್ಳಿ ಮಹೋತ್ಸವದ ಹಿನ್ನಲೆ ಆಯೊಜಿಸಿದ್ದ ಎರಡನೇ ದಿನದ ನಡೆದ ಎರಡು ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಈ ಜೋಡಿ ನಿಗದಿತ 20 ನಿಮಿಷದಲ್ಲಿ 3,913 ಅಡಿ ದೂರದವರೆಗೆ ಭಾರ ಎಳೆದು ಪ್ರಥಮ ಬಹುಮಾನ ಗೆದ್ದ ನಂದ್ಯಾಲ ಜಿಲ್ಲೆಯ ಸಂತಮಾಗಲೂರು ಗ್ರಾಮದ ವಜ್ರಲ ತೇಜಸ್ವಿರೆಡ್ಡಿ ಅವರ ಜೋಡಿ ಎತ್ತುಗಳ ಮಾಲಕರಿಗೆ 90,000 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಪ್ರದಾನ ಮಾಡಲಾಯಿತು.
3,900 ಅಡಿ ದೂರ ಭಾರ ಎಳೆದ ಕರ್ನೂಲ್ ಜಿಲ್ಲೆಯ ಚಂದ್ರಕಲಾ ಗ್ರಾಮದ ಶ್ರಾವಣ ಕುಮಾರ ಅವರ ಜೋಡಿ ಎತ್ತುಗಳಿಗೆ ದ್ವಿತೀಯ ಬಹುಮಾನವಾಗಿ 65 ಸಾವಿರ ರೂ. ನಗದು ಹಾಗೂ 3,163 ಅಡಿ ಭಾರ ಎಳೆದ ಸೂರ್ಯಪೇಟೆ ಜಿಲ್ಲೆಯ ಹುದುರ ನಗರ ಗ್ರಾಮದ ಜಕ್ಕಲ ಸಹಸ್ರ ಯಾದವ ಅವರ ಜೋಡಿ ಎತ್ತುಗಳಿಗೆ ತೃತೀಯ ಬಹುಮಾನವಾಗಿ 55 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಕೊಡಲಾಯಿತು.
3,022 ಅಡಿ ದೂರ ಬಾರ ಎಳೆದ ಕರ್ನೂಲ್ ಜಿಲ್ಲೆಯ ರುದ್ರವರಂ ಗ್ರಾಮದ ಗೋಪಾಲಗೌಡ ಅವರ ಜೋಡಿ ಎತ್ತುಗಳಿಗೆ ನಾಲ್ಕನೇ ಬಹುಮಾನವಾಗಿ 45 ಸಾವಿರ ರೂ. ನಗದು ಹಾಗೂ 3,001 ಅಡಿ ದೂರ ಭಾರ ಎಳೆದ ಗದ್ವಾಲ ಜಿಲ್ಲೆಯ ಪಚರ್ಲಾ ಗ್ರಾಮದ ತಲಾರಿ ಪೆದ್ದ ಶರಬಯ್ಯ ಅವರ ಜೋಡಿ ಎತ್ತುಗಳಿಗೆ ಐದನೇ ಬಹುಮಾನವಾಗಿ 40 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಆದೇ ರೀತಿ 2,045 ಅಡಿ ದೂರ ಭಾರ ಎಳೆದ ಕರ್ನುಲ್ ಜಿಲ್ಲೆಯ ರೇಮಟ ಗ್ರಾಮದ ಸಿನ್ನ ಸಿದ್ದನಾಯ್ಡು ಅವರ ಜೋಡಿ ಎತ್ತುಗಳಿಗೆ ಆರನೇ ಬಹುಮಾನವಾಗಿ 30 ಸಾವಿರ ರೂ. ನಗದು ಹಾಗೂ 2,606 ಅಡಿ ದೂರ ಎಳೆದ ನಂದ್ಯಾಲ ಜಿಲ್ಲೆಯ ರಂಗಪೂರ ಗ್ರಾಮದ ಜುಟ್ಟೂರು ರಾಮಕೃಷ್ಣ ರೆಡ್ಡಿ ಅವರ ಜೋಡಿ ಎತ್ತುಗಳಿಗೆ ಏಳನೇ ಬಹುಮಾನವಾಗಿ 20 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಮುನ್ನೂರು ಕಾಪು ಸಮಾಜದ ಬೆಲ್ಲಂ ನರಸರೆಡ್ಡಿ ಅವರು ವಿಜೇತರಿಗೆ ನಗದು ಬಹುಮಾನ ನೀಡಿ ಗೌರವ ಸನ್ಮಾನಿಸಿದರು.